Sunday, December 22, 2024

Latest Posts

ವಿಷ್ಣು ಅವತಾರದಲ್ಲಿ ‘ಲಕ್ಕಿ ಮ್ಯಾನ್’ ಅಪ್ಪು..!

- Advertisement -

Film News:

ಅಪ್ಪು  ಮರೆಯಾದ್ರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ  ಜೀವಂತ. ಇದೀಗ  ಮರೆಯಾದ ಮಾಣಿಕ್ಯ ಮತ್ತೆ ವಿಷ್ಣು ಅವತಾರವೆತ್ತಿ ಬಂದಿದ್ದಾರೆ. “ಲಕ್ಕಿ  ಮ್ಯಾನ್” ಅಪ್ಪು ನೋಡಿ  ಅಭಿಮಾನಿಗಳು ಭಾವುಕರಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಲಕ್ಕಿಮ್ಯಾನ್’ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಈ ಟ್ರೈಲರ್ ರಿಲೀಸ್ ಮಾಡಿದ್ದರು. ಆದರೆ ಗಣೇಶ ಹಬ್ಬದ ಸಂಭ್ರಮದಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನದ ‘ಲಕ್ಕಿಮ್ಯಾನ್’ ಮುಂದಿನ ವಾರ ತೆರೆಗೆ ಬರಲಿದೆ.

ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಅಪ್ಪು ಈ ಚಿತ್ರದಲ್ಲಿ ಶ್ರೀವಿಷ್ಣುವಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‌ ಲವ್, ಫ್ರೆಂಡ್‌ಶಿಫ್, ಲೈಫ್‌ಗೆ ಗೈಡ್ ಆಗಿ ಗಾಡ್ ಆಗಿ ಪುನೀತ್ ರಾಜ್‌ಕುಮಾರ್ ಮಿಂಚಿದ್ದಾರೆ. ಟ್ರೈಲರ್ ನೋಡುವ ಅಷ್ಟು ಹೊತ್ತು ಪುನೀತ್ ರಾಜ್‌ಕುಮಾರ್ ನೆನಪಿನಲ್ಲೇ ಅಭಿಮಾನಿಗಳು ಭಾವುಕರಾಗುತ್ತಾರೆ. ಈ ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಪ್ರೇಕ್ಷಕರಿಗ ಮಸ್ತ್ ಮನರಂಜನೆ ನೀಡುವ ಸುಳಿವು ಟ್ರೈಲರ್‌ನಲ್ಲಿ ಸಿಗುತ್ತಿದೆ.

‘ಲಕ್ಕಿಮ್ಯಾನ್’ ಚಿತ್ರದಲ್ಲಿ ಸಾಧು ಕೋಕಿಲ, ನಾಗಭೂಷಣ್, ಸುಂದರ್‌ ರಾಜ್‌, ರೋಶನಿ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅಪ್ಪು, ಸಾಧು ಕಾಂಬಿನೇಷನ್‌ ಕಾಮಿಡಿ ದೃಶ್ಯಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಲವರ್‌ ಬಾಯ್ ಆಗಿ ಫ್ಯಾಮಿಲಿಮ್ಯಾನ್ ಆಗಿ ಟ್ರಯಾಂಗಲ್ ಲವ್‌ ಸ್ಟೋರಿಯಲ್ಲಿ ಮುಳುಗಿ ತೇಲಿದ್ದಾರೆ. ಮುಳುಗಿದಾಗ ಕೈ ಹಿಡಿದು ಮೇಲೆತ್ತಲು ದೇವರಾಗಿ ಪುನೀತ್ ರಾಜ್‌ಕುಮಾರ್ ಇದ್ದಾರೆ. ಇನ್ನು ಪ್ರಭುದೇವಾ ಜೊತೆ ಅಪ್ಪು ಸ್ಪೆಷಲ್ ಡ್ಯಾನ್ಸ್‌ ನಂಬರ್ ಕೂಡ ಚಿತ್ರದಲ್ಲಿದೆ. ಅದೆಲ್ಲದರ ಝಲಕ್ ಟ್ರೈಲರ್‌ನಲ್ಲಿ ನೋಡಬಹುದು.

ವಿ2 ವಿಜಯ್ ವಿಕ್ಕಿ ಮ್ಯೂಸಿಕ್‌ನಲ್ಲಿ ಈಗಾಗಲೇ ‘ಲಕ್ಕಿಮ್ಯಾನ್’ ಸಿನಿಮಾ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಛಾಯಾಗ್ರಾಹಕ ಜೀವ ಶಂಕರ್ ಬಹಳ ಸೊಗಸಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಇನ್ನು ಟೀಸರ್ ಕೊನೆಯಲ್ಲಿ ಪುನೀತ್ ರಾಜ್‌ಕುಮಾರ್ ಶ್ರೀವಿಷ್ಣುವಿನ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಬಾರದಲೋಕಕ್ಕೆ ಪಯಣ ಬೆಳೆಸಿರುವ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ಮನಸ್ಸಿನಲ್ಲಿ ದೇವರ ಸ್ಥಾನ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ದೇವರಾಗಿಯೇ ಕಾಣಿಸಿಕೊಂಡಿರುವುದು ವಿಪರ್ಯಾಸ.

ದೊಡ್ಮನೆ  ದೊರೆ  ದೇವರ ಅವತಾರವಲ್ಲ, ಅಪ್ಪು  ದೇವರ ಸ್ಥಾನವನ್ನೇ ಪಡೆದಿದ್ದಾರೆ ಎಂಬುವುದು ಅಭಿಮಾನಿಗಳ ಮಾತು.

ಗಣೇಶ ಹಬ್ಬಕ್ಕೆ ‘ಹಿರಣ್ಯ’ ಸಿನಿಮಾದ ನಯಾ ಪೋಸ್ಟರ್ ರಿಲೀಸ್…ಮಾಸ್ ಲುಕ್ ನಲ್ಲಿ ಮಿಂಚಿದ ಮ್ಯಾಸೀವ್ ಸ್ಟಾರ್ ರಾಜವರ್ಧನ್

ಅಕ್ಷಿತ್ ಸಿನಿಮಾಗೆ ಡಾಲಿ ಧನಂಜಯ್ ಸಾಥ್…ಖೆಯೊಸ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಜಶ್ವಂತ್ ಮೇಲೆ ಮುನಿಸೇಕೆ ನಂದಿನಿ…?!

- Advertisement -

Latest Posts

Don't Miss