Sunday, September 8, 2024

Latest Posts

ಲುಲುಕುಮಾರ್ ಎಂದು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತಿರುಗೇಟು

- Advertisement -

Banglore News: ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ. ಈ ಬಗ್ಗೆ ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿರುವ ಜೆಡಿಎಸ್ ಖಾರವಾಗಿ ಪ್ರಹಾರ ನಡೆಸಿದೆ.

ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ʼಕಮೀಷನ್ ಕಾಂಗ್ರೆಸ್ʼನ ಹೊಸ ವರಸೆ ಮತ್ತು ಹೊಸ ‘ಕಸ’ವರಿಕೆ!! ಎಂದು ಹೇಳಿದೆ ಅಲ್ಲದೆ, ಕಮೀಷನ್ ಕಾಂಗ್ರೆಸ್ ಹ್ಯಾಷ್ ಟ್ಯಾಗ್ ಮಾಡಿ ಕುಟುಕಿದೆ.

ಮಾಜಿ ಮುಖ್ಯಮಂತ್ರಿಗಳು ವೆಸ್ಟ್‌ ಎಂಡ್‌ ಹೋಟೆಲ್ ನಲ್ಲಿ ಇದ್ದರು ಎಂದು ಹೇಳಿದ್ದ ಕಾಂಗ್ರೆಸ್ ಗೆ, “ವೆಸ್ಟ್‌ ಎಂಡ್‌ ಲೆಕ್ಕ ಇರಲಿ, ʼಸಿಎಂ ಟಿಪ್ಪಣಿ ಬಿಕರಿʼಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, ಮೂರು ಟಿಪ್ಪಣಿ!! ಇದ್ಯಾವ ಅರ್ಥಶಾಸ್ತ್ರ?? ಕೌಟಿಲ್ಯನೂ ಬೆಚ್ಚಿಬೀಳುವಂಥ ರಾಜನೀತಿ!! ಈ 3 ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ ವೈಎಸ್ ಟಿ ಟ್ಯಾಕ್ಸ್ ಹುಂಡಿಗೋ? ಇಲ್ಲೇ ಸಾಕ್ಷ್ಯ ಇದೆ, ಸತ್ಯ ಹೇಳಿ. ಪಾಪ.. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ!!” ಎಂದು ಜೆಡಿಎಸ್ ಪ್ರಹಾರ ಕೊಟ್ಟಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ವೈಎಸ್ ಟಿ ಟ್ಯಾಕ್ಸ್ ಬಗ್ಗೆ ಹೇಳಿ, ʼಕಾಸಿಗಾಗಿ ಹುದ್ದೆʼ (CashForPosting) ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟರೂ ಆ ಅಸಹ್ಯ ತನ್ನದಲ್ಲ ಎನ್ನುವ ʼಅವಿವೇಕʼ ಕಾಂಗ್ರೆಸ್ ಪಕ್ಷದ್ದು. ಆ ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ʼಎಂಡ್ ಎನ್ನುವ ಸವಕಲು ವಿಷಯ ನೆನಪು ಮಾಡಿಕೊಂಡಿದೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.

ವೆಸ್ಟ್‌ʼಎಂಡ್‌ ಬಾಡಿಗೆ ಮಾತಿರಲಿ; ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ? ಒಂದು ವೇಳೆ ಮಾಡಬಹುದಾದರೆ, ನಿಮ್ಮ ʼಲುಲುಕುಮಾರ್ʼಗಿಂತ ಬೆಸ್ಟ್‌ ಎಕಾನಮಿಸ್ಟ್‌ ಇನ್ನೊಬ್ಬರಿಲ್ಲ, ಹಾಗಿದ್ದರೆ, ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲವೇ? ಎಂದು ಕಿಡಿಕಾರಿರುವ ಜೆಡಿಎಸ್, ಲುಲುಕುಮಾರ್ ಎಂದು ಹ್ಯಾಷ್ ಟ್ಯಾಗ್ ಮಾಡಿ ಕಾಂಗ್ರೆಸ್ ಕಾಲೆಳೆದಿದೆ.

ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ರಾಜುಗೌಡ ಗರಂ

ಸಾರಿ…… ಸಾರಿ…..ವಿಪಕ್ಷ ನಾಯಕರಿಲ್ಲ…?!

10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!

- Advertisement -

Latest Posts

Don't Miss