ಜುಲೈ 5, 2020ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದ್ದು, ಭಾರತದಲ್ಲಿ ಗ್ರಹಣ ಕಾಣದಿರುವುದರಿಂದ ಈ ಬಾರಿ ಚಂದ್ರ ಗ್ರಹಣದ ಆಚರಣೆ ಇರುವುದಿಲ್ಲ.

ಇನ್ನು ಗುರು ಪೌರ್ಣಮಿ ದಿನ ಚಂದ್ರ ಗ್ರಹಣ ಸಂಭವಿಸಿದೆ. ಬೆಳಿಗ್ಗೆ 8 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. 11 ಗಂಟೆ 22 ನಿಮಿಷಕ್ಕೆ ಮೋಕ್ಷ ಕಾಲ ಇರುತ್ತದೆ.
ಇನ್ನು ಯಾವ ರಾಶಿಯವರಿಗೆ ಶುಭ ಅಶುಭವೆಂದು ನೋಡುವುದಾದರೆ, ಮೇಷ, ಮಿಥುನ, ಕರ್ಕಾಟಕ, ತುಲಾ, ಕುಂಭ, ಮೀನ ರಾಶಿಗೆ ಶುಭ ಫಲ ದೊರೆಯಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಚಂದ್ರಗ್ರಹಣದ ಬಳಿಕ ಒಳ್ಳೆಯದಾಗಲಿದೆ . ಬದುಕಿನ ಹೊಸ ದಾರಿ ಕಾಣುವ ಇವರು ಖುಷಿಯಿಂದ ಇರುತ್ತಾರೆ. ಈ ರಾಶಿಯವರ ಮನೆಯಲ್ಲಿರುವ ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ. ಅಲ್ಲದೇ ಹಣಕಾಸಿನ ತೊಂದರೆಯೂ ದೂರವಾಗಲಿದೆ.
ಮಿಥುನ: ಈ ರಾಶಿಯ ಪ್ರೇಮಿಗಳಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ ಇದೆ. ಚಂದ್ರಗ್ರಹಣದ ಬಳಿಕ ಇವರು ತೆಗೆದುಕೊಳ್ಳುವ ನಿರ್ಧಾರವು ಇವರ ಜೀವನವನ್ನೇ ಬದಲಾಯಿಸುತ್ತದೆ.
ಕರ್ಕಾಟಕ: ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ಅದನ್ನ ಸದುಪಯೋಗ ಪಡಿಸಿಕೊಳ್ಳಿ. ಸಂಸಾರದಲ್ಲಿ ಸಮಸ್ಯೆ ಇದ್ದರೂ ಪತಿ ಪತ್ನಿ ಬಾಂಧವ್ಯ ಇದನ್ನ ಸರಿದೂಗಿಸಲಿದೆ.
ತುಲಾ: ಇಷ್ಟು ದಿನ ಇದ್ದ ಅನಾವಶ್ಯಕ ಖರ್ಚು ವೆಚ್ಚ ಕಡಿಮೆಯಾಗಿ ಉಳಿತಾಯ ಹೆಚ್ಚಾಗುತ್ತದೆ. ಪತಿ ಪತ್ನಿ ಪ್ರೀತಿಯಿಂದ ಬಾಳುವಿರಿ. ಮಕ್ಕಳಿಂದ ಖುಷಿ ಸಿಗುವ ಸಾಧ್ಯತೆ ಇದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯದ ಸೂಚನೆ ಇದೆ.
ಕುಂಭ: ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳುವ ಶಕ್ತಿ ನಿಮಗಿರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು. ಎಚ್ಚರಿಕೆ ವಹಿಸಿ.
ಮೀನ: ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಲಾಭ ಗಳಿಸುವಿರಿ. ಯಾವುದೇ ಉದ್ಯಮದಲ್ಲಿ ಬಂಡವಾಳ ಹೂಡುವುದಿದ್ದರೆ ಆತುರತ ನಿರ್ಧಾರ ತೆಗೆದುಕೊಳ್ಳಬೇಡಿ.
