- Advertisement -
International news :
ವಿಶ್ವದ ಅತ್ಯಂತ ದೀರ್ಘಾಯುಷಿ ಎನಿಸಿಕೊಂಡಿದ್ದ ಫ್ರಾನ್ಸ್ ದೇಶದ ಕ್ರೈಸ್ತ ಸನ್ಯಾಸಿನಿ ಲೂಸಿಲಿ ರ‍್ಯಾಂಡನ್ ತಮ್ಮ 118 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ಎಎಫ್ ಪಿ ಸುದ್ದಿಸಂಸ್ಥೆ ತಿಳಿಸಿದೆ.. ಸಿಸ್ಟರ್ ಆಂದ್ರೆ ಅಂತಲೇ ಜನಪ್ರಿಯರಾಗಿದ್ದ ರ‍್ಯಾಂಡನ್ ಫ್ರಾನ್ಸ್ ದಕ್ಷಿಣ ಭಾಗದ ಪ್ರಾಂತ್ಯವೊಂದರಲ್ಲಿ ಫೆಬ್ರುವರಿ 11, 1904 ರಂದು ಜನಿಸಿದ್ದರು. ಅವರು ಹುಟ್ಟಿದ ಒಂದು ದಶಕದ ಬಳಿಕ ಮೊದಲ ಜಾಗತಿಕ ಯುದ್ಧ ಆರಂಭವಾಗಿತ್ತು. ರ‍್ಯಾಂಡನ್ ಟೌಲನಲ್ಲಿರುವ ತಮ್ಮ ನರ್ಸಿಂಗ್ ಹೋಮ್ ನಲ್ಲಿ ನಿದ್ರಿಸುತ್ತಿರುವಾಗಲೇ ಕೊನೆಯುಸಿರೆಳೆದರು ಎಂದು ಎಂದು ಸೆಂಟೆ-ಕ್ಯಾಥರೀನ್-ಲೇಬರ್ ನರ್ಸಿಂಗ್ ಹೋಮ್ ನ ವಕ್ತಾರರಾಗಿರುವ ಟ್ಯಾವೆಲ್ಲ ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಮೆರಿಕದ ನ್ಯೂ ಯಾರ್ಕ್ ನಗರದಲ್ಲಿ ಮೊದಲ ಸಬ್ ವೇ ಆರಂಭಗೊಂಡ ಸಂದರ್ಭದಲ್ಲಿ ರ‍್ಯಾಂಡನ್ ಹುಟ್ಟಿದ್ದರು ಎಂಬ ಮಾಹಿತಿ ಇದೆ.
- Advertisement -