Wednesday, December 4, 2024

Latest Posts

Madduru News: ಒಕ್ಕಲಿಗ ಸ್ವಾಮೀಜಿ ಮೇಲೆ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

- Advertisement -

Madduru News: ಒಕ್ಕಲಿಗ ಸಮಾಜದ ಗುರುಗಳಾದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದ್ದು, ಇದನ್ನು ಖಂಡಿಸಿ, ಇಂದು ಒಕ್ಕಲಿಗ ಸಂಘದಿಂದ ಪ್ರತಿಭಟನೆ ನಡೆಯಿತು.

ಶ್ರೀ ನಾಡಪ್ರಭು ಕೆಂಪೇಗೌಡರ ಒಕ್ಕಲಿಗ ಸಂಘ, ಚುಂಚಶ್ರೀ ಗೆಳೆಯರ ಬಳಗದಿಂದ ಪ್ರತಿಭಟನೆ ನಡೆದಿದ್ದು, ಸ್ವಾಮೀಜಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಒಕ್ಕಲಿಗ ಸಂಘದ ಅಧ್ಯಕ್ಷ ದೇಶಹಳ್ಳಿ ಪಿ.ಶಿವಪ್ಪ, ಚಂದ್ರಶೇಖರನಾಥ ಸ್ವಾಮೀಜಿ ಕಾರ್ಯಕ್ರಮವೊಂದರಲ್ಲಿ ಬಾಯಿತಪ್ಪಿ ಮುಸ್ಲೀಂಮರಿಗೆ ಮತದಾನದ ಹಕ್ಕು ನಿಷೇಧಿಸಬೇಕು ಎಂದಿದ್ದರು. ಇದಕ್ಕಾಗಿ ಅವರು ಕ್ಷಮೆ ಕೂಡ ಕೇಳಿದ್ದರು. ಆದರೆ ಮುಸ್ಲಿಂ ವ್ಯಕ್ತಿಯೋರ್ವ ಇವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಕ್ಕೆ ಈ ರೀತಿ ಅರೆಸ್ಟ್ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಪ್ರಕರಣ ದಾಖಲಿಸಿದ್ದಲ್ಲದೇ, ಸ್ವಾಮೀಜಿಗಳನ್ನು ಠಾಣೆಗೆ ಬರುವಂತೆ ನೋಟೀಸ್ ನೀಡಿದ್ದು ಖಂಡನೀಯ. ಈಗಲೇ ದಾಖಲು ಮಾಡಿರುವ ಎಫ್‌ಐಆರ್ ರದ್ದುಗೊಳಿಸಬೇಕು. ಸ್ವಾಮೀಜಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇಲ್ಲದಿದ್ದಲ್ಲಿ, ಸರ್ಕಾರದ ವಿರುದ್ಧ ನಮ್ಮ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

- Advertisement -

Latest Posts

Don't Miss