Wednesday, December 11, 2024

Latest Posts

Health Tips: ಬೊಜ್ಜು ಬರಲು ಕಾರಣವೇನು ಗೊತ್ತಾ..?

- Advertisement -

Health Tips: ಬೊಜ್ಜು ಕರಗಿಸೋಕ್ಕೆ ನಾವು ಅದೆಷ್ಟು ಪ್ರಯತ್ನಿಸುತ್ತೇವೆ. ಆದರೆ ಬೊಜ್ಜು ಕರಗುವುದಿಲ್ಲ. ಯಾಕಂದ್ರೆ ಅದು ದೇಹದ ತಪ್ಪಲ್ಲ, ನಾವು ಮಾಡುವ ಕೆಲವು ತಪ್ಪಿನಿಂದಲೇ, ನಮ್ಮ ದೇಹದ ಬೊಜ್ಜು ಕರಗುವುದಿಲ್ಲ. ಹಾಗಾಗಿ ನಾವು ಬಜ್ಜು ಕರಗಿಸುವ ಮುನ್ನ, ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯಬೇಕು. ಹಾಗಾದ್ರೆ ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.

ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆದಾಗ, ಥೈರಾಯ್ಡ್ ಸಮಸ್ಯೆ ಸೇರಿ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ದೇಹದ ಬೊಜ್ಜು ಬೆಳೆಯುತ್ತದೆ. ಅಲ್ಲದೇ, ನಾವು ಸೇವಿಸುವ ಆಹಾರದಿಂದಲೂ ನಮ್ಮ ದೇಹದ ಬೊಜ್ಜು ಬೆಳೆಯುತ್ತದೆ.

ಹಸಿವಾದಾಗ ಸಿಹಿ ತಿಂಡಿ, ಚಾಕೋಲೇಟ್ಸ್, ಪಿಜ್ಜಾ, ಬರ್ಗರ್‌ನಂಥ ಬೇಕರಿ ತಿಂಡಿ ತಿಂದಾಗ, ಇದರಲ್ಲಿರುವ ಮೈದಾ, ಸಕ್ಕರೆಯ ಅಂಶ ದೇಹ ಸೇರಿ, ಹೊಟ್ಟೆಯ ಬೊಜ್ಜು ಹೆಚ್ಚುಮಾಡುತ್ತದೆ. ಇವು ತಿನ್ನಲು ರುಚಿಯಾಗಿರುವ ಕಾರಣ, ಒಂದು ತಿಂದ ಬಳಿಕ ಮತ್ತೊಂದು ತಿನ್ನಬೇಕು ಎನ್ನಿಸುತ್ತದೆ. ಹೀಗೆ ಮಾಡಿದಾಗಲೇ, ನಮ್ಮ ದೇಹದ ಬೊಜ್ಜು ಬೆಳೆಯಲು ಶುರುವಾಗುತ್ತದೆ.

ನಮ್ಮ ದೇಹಕ್ಕೆ ಬೇಕಾದ ಪೋಷ್ಟಿಕಾಂಶಗಳು ಸಿಗದೇ, ಬರೀ ಮೈದಾ ಸಕ್ಕರೆ ತುಂಬಿದ ಆಹಾರವನ್ನೇ ನಾವು ಸೇವಿಸಿದಾಗಲೇ, ನಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಸೇವನೆ ಮಾಡುವುದು, ಸಿಕ್ಕ ಸಿಕ್ಕ ಮಾತ್ರೆಗಳನ್ನು ಸೇವಿಸುವುದು ಕೂಡ ನಮ್ಮ ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

ಅಲ್ಲದೇ, ನೀವು ಯೋಗ, ವ್ಯಾಯಾಮ, ಜಿಮ್‌ ಮಾಡಿ, ಡಯಟ್ ಮಾಡದೇ, ಜಂಕ್ ಫುಡ್ ಸೇವಿಸುತ್ತಲೇ ಇದ್ದರೆ, ನಿಮ್ಮ ದೇಹದ ಬೊಜ್ಜು ಕರಗಲು ಸಾಧ್ಯವೇ ಇಲ್ಲ.

- Advertisement -

Latest Posts

Don't Miss