ನವೆಂಬರ್ ಕ್ರಾಂತಿ, ಅಧಿಕಾರ ಹಂಚಿಕೆ ವಿಚಾರವಾಗಿ ಮಾದೇಶ್ವರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಧರ್ಮ ಪೀಠದಲ್ಲಿ, ಧರ್ಮ ಸಂಕಿರಣ ನಡೆಯಿತು. ಈ ವೇಳೆ ಪೀಠಾಧ್ಯಕ್ಷರಾದ ಮಾದೇಶ್ವರ ಸ್ವಾಮೀಜಿ ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕ ಭವಿಷ್ಯ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇತ್ತೀಚಿನ ರಾಜಕೀಯ ಸಂಘರ್ಷಗಳ ಮಧ್ಯೆ ಸರ್ಕಾರಕ್ಕೆ ಸಂಕಷ್ಟ ಬರುತ್ತದೆ ಎಂಬ ಚರ್ಚೆಗಳಿವೆ.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ಕಾಂಗ್ರೆಸ್ ಸರ್ಕಾರಕ್ಕೆ ಹೊಡೆತ ಬಿತ್ತು ಎಂದು ಕೆಲ, ವೀರಶೈವ ಲಿಂಗಾಯತ ಸ್ವಾಮೀಜಿಗಳು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ತಿರುಗೇಟು ನೀಡಿದ್ದು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಎಂ.ಬಿ. ಪಾಟೀಲ್ ಅವರು ಮುಂಚೂಣಿಯಲ್ಲಿದ್ದರು.
ಆದರೆ ಅವರು ಗೆದ್ದಿದ್ದಾರಲ್ಲ. ಆ ಹೋರಾಟದಿಂದ ಸರ್ಕಾರಕ್ಕೆ ಹೊಡೆತ ಬಿತ್ತು ಎಂದು ತಿಳಿದುಕೊಳ್ಳಬಾರದು. ಅದಕ್ಕೆ ಇನ್ನೂ ಅನೇಕ ಕಾರಣಗಳಿದ್ದವು. ರಾಜಕಾರಣಿಗಳಿಗೆ ಅದು ಗೊತ್ತು ಎಂದಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಿದರೆ ಯಾವುದೇ ಕಾರಣಕ್ಕೂ ಸೋಲು ಬರಲಾರದು. ಇದು ಧರ್ಮದ ವಿಷಯ. ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ.

