ಡಾರ್ಲಿಂಗ್ ಪ್ರಭಾಸ್ ಹಾಗೂ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಒಂದಲ್ಲ ಒಂದು ವಿಷ್ಯದಿಂದ ಸುದ್ದಿಯಲ್ಲಿ ಇರುತ್ತದೆ. ಇತ್ತೀಚೆಗಷ್ಟೇ ಸಲಾರ್ ಸಿನಿಮಾಕ್ಕೆ ಸೌತ್ ಬ್ಯೂಟಿ ಶ್ರುತಿ ಹಾಸನ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ರು. ಇದೀಗ ಸಲಾರ್ ಅಡ್ಡಕ್ಕೆ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ. ಇವ್ರು ಪ್ರಭಾಸ್ ಎದುರು ತೊಡೆ ತಟ್ಟಲಿರುವ ಖಡಕ್ ವಿಲನ್.
ಯಸ್, ಪ್ರಭಾಸ್-ಪ್ರಶಾಂತ್ ಸಲಾರ್ ಸಿನಿಮಾಕ್ಕೆ ಯಾರು ಆಗ್ತಾರೆ ವಿಲನ್ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದಂತು ಸುಳ್ಳಲ್ಲ. ಕಾಲಿವುಡ್ ಸ್ಟಾರ್ ವಿಜಯ್ ಸೇತುಪತಿ ಬರ್ತಾರೆ ಅನ್ನೋ ಬಿಸಿಬಿಸಿ ನ್ಯೂಸ್ ಗಾಂಧಿನಗರದದಿಂದ ಕಾಲಿವುಡ್ ವರೆಗೂ ಹಬ್ಬಿತ್ತು. ಇದೀಗ ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದಿದ್ದು, ಕೊನೆಗೂ ಸಲಾರ್ ಸಿನಿಮಾಕ್ಕೆ ವಿಲನ್ ಯಾರು ಅನ್ನೋದು ಗೊತ್ತಾಗಿದೆ.
ಕನ್ನಡದ ಖಡಕ್ ವಿಲನ್ ಮಧು ಗುರುಸ್ವಾಮಿ ಸಲಾರ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ ವಜ್ರಕಾಯ, ಭಜರಂಗಿ ಸೇರಿದಂತೆ ಮಫ್ತಿ ಸಿನಿಮಾದಲ್ಲಿ ತಮ್ಮ ವಿಲನಿಸಂ ಖದರ್ ತೋರಿಸಿದ್ದ ಮಧು ಗುರುಸ್ವಾಮಿ ಸಲಾರ್ ಸಿನಿಮಾದಲ್ಲಿ ಖಡಕ್ ಖಳನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಗುರುಸ್ವಾಮಿ, ಸಲಾರ್ ಸಿನಿಮಾದ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಈಗಾಗ್ಲೇ ಸಿನಿಮಾದ ಶೂಟಿಂಗ್ ಗೋದಾವರಿ ಗಣಿಯಲ್ಲಿ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಅಂತೂ ಇಂತೂ ಡಾರ್ಲಿಂಗ್ ಪ್ರಭಾಸ್ ಎದುರು ಅಬ್ಬರಿಸಲು ಕನ್ನಡದ ಖಳನಟ ಮಧು ಗುರುಸ್ವಾಮಿ ಎಂಟ್ರಿ ಕೊಟ್ಟಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತೊಂದು ಲೆವೆಲ್ ಗೆ ಕೊಂಡೊಯ್ಯದಿದೆ.