Madhya Pradesh : ಮಧ್ಯಪ್ರದೇಶದ ಸಿಎಂ ಡಾ.ಮೋಹನ್ ಯಾದವ್ ಅವರ 19 ಬೆಂಗಾವಲು ಪಡೆ ವಾಹನಕ್ಕೆ ಡಿಸೇಲ್ ಬದಲು ನೀರು ಹಾಕಿ ಎಡವಟ್ಟು ಮಾಡಲಾಗಿದೆ.
ಗುರುವಾರ ರಾತ್ರಿ 10 ಗಂಟೆಗೆ ಸಿಎಂ ಬೆಂಗಾವಲಿನ 19 ಕಾರುಗಳು ಡಿಸೇಲ್ ಹಾಕಿಸಲು ರತ್ಲಂ ನಗರ ಮಿತಿಯ ದೋಸಿಗಾವ್‌ನಲ್ಲಿರುವ ಭಾರತ್ ಪೆಟ್ರೋಲಿಯಂ ಶಕ್ತಿ ಇಂಧನ್ ಪೆಟ್ರೋಲ್ ಪಂಪ್‌ಗೆ ತೆರಳಿತ್ತು. ಆದರೆ ವಾಹನಗಳಿಗೆ ಡಿಸೇಲ್ ತುಂಬಿದ ಬಳಿಕ, ಗಾಡಿ ರಸ್ತೆ ಮಧ್ಯೆ ನಿಲ್ಲಲು ಶುರುವಾಯಿತು. ಎಲ್ಲ ಬೆಂಗಾವಲು ಪಡೆ ವಾಹನ ಹೀಗೆ ನಿಂತಿದ್ದು ನೋಡಿ ಸಿಎಂ ಕೂಡ ಭಯಭೀತರಾಗಿದ್ದಾರೆ.
ಆದರೆ ಬಳಿಕ ಏನು ಸಮಸ್ಯೆ ಎಂದು ನೋಡಿದಾಗ, ಡಿಸೇಲ್ ಬದಲು ನೀರು ತುಂಬಿಸಿದ್ದಾರೆಂದು ತಿಳಿದು ಬಂದಿದೆ. ತುಂಬಿಸಿದ್ದ 20 ಲೀ ಡಿಸೇಲ್‌ನಲ್ಲಿ 10 ಲೀ ನೀರು ಎಂದು ತಿಳಿದುಬಂದಿದೆ. ಇದೀಗ ಈ ಪಂಪ್‌ನ್ನು ಸೀಲ್ ಮಾಡಿ, ವಿಚಾರಣೆ ನಡೆಸಲಾಗಿದೆ.
ಆದರೆ ಇದು ಸಿಎಂರನ್ನು ಗುರಿಯಾಗಿಸಿ ನಡೆಸಿದ ಕೃತ್ಯವಲ್ಲ. ಬದಲಾಗಿ, ಇಲ್ಲಿ ಎಲ್ಲರಿಗೂ ಮೋಸವನ್ನೇ ಮಾಡಲಾಗಿದೆ ಎಂದು ತಿಳಿದುಬಂದಿದೆ. ಏಕೆಂದರೆ ಇವರಿಗಿಂತ ಮುನ್ನ ಬಂದಿದ್ದ Truck Driver ಗೂ ಕೂಡ ಇದೇ ಅನುಭವವಾಗಿದೆ. ಆದರೆ ವ್ಯವಸ್ಥಾಪಕರನ್ನು ಕೇಳಿದರೆ, ಡಿಸೇಲ್‌ನಲ್ಲಿ ನೀರು ಸೋರಿಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ತನಿಖೆ ಬಳಿಕ ಸತ್ಯಾಸತ್ಯತೆ ಗ“ತ್ತಾಗಬೇಕಿದೆ. ಸಿಎಂ ಬೇರೆ ವಾಹನಗಳ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ.