ಬೆಂಗಳೂರು: ಮಧ್ಯಪ್ರದೇಶ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿಗೆ ಮುತ್ತಿಕ್ಕಿದ್ದು ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ನೂತನ ಸಾಮ್ರಾಟನಾಗಿ ಹೊರಹೊಮ್ಮಿದೆ.
23 ವರ್ಷಗಳ ಹಿಂದೆ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಫೈನಲ್ ಪಂದ್ಯವನ್ನು ಕೈಚೆಲ್ಲಿದ್ದ ಮಧ್ಯಪ್ರದೇಶ ಇಂದು ನೂತನ ಚಾಂಪಿಯನ್ನಾಗಿ ಹೊರಹೊಮ್ಮಿದೆ.
ಭಾನುವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಐದನೆ ಹಾಗೂ ಅಂತಿಮ ದಿನದಾಟದ ಪಂದ್ಯದಲ್ಲಿ ಮುಂಬೈ ತಂಡ ಎರಡನೆ ಇನ್ನಿಂಗ್ಸ್‍ನಲ್ಲಿ 269 ರನ್ ಗಳಿಸಿ 108ರನ್‍ಗಳ ಸುಲಭ ಗುರಿ ನೀಡಿತು.
ರಣಐ ಟ್ರೋಫಿ ಗೆಲ್ಲಲು ಸ್ಟಾರ್ ಆಟಗಾರರು ಬೇಕಾಗಿಲ್ಲ ಅನ್ನೋದನ್ನು ಮಧ್ಯ ಪ್ರದೇಶ ತಂಡ ಸಾಬೀತು ಮಾಡಿದೆ.
ಎರಡನೆ ಇನ್ನಿಂಗ್ಸ್‍ನಲ್ಲಿ ಸಾಧಾರಣ ಗುರಿ ಬೆನ್ನತ್ತಿದ ಮಧ್ಯಪ್ರದೇಶ 29.5 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ 6 ವಿಕೆಟ್‍ಗಳಿಂದದ ವಿಜಯಿಯಾಯಿತು.
ಮಧ್ಯ ಪ್ರದೇಶ ಪರ ಹಿಮಾನ್ಶು ಮಂತ್ರಿ 37, ಯಶ್ ದುಬೆ 1, ಶುಭಂ ಶರ್ಮಾ 30, ಪಾರ್ಥ್ ಸಾಹಾನಿ 5, ರಜತ್ ಪಟಿಧಾರ್ ಅಜೇಯ 30 ಮತ್ತು ಆದಿತ್ಯ ಶ್ರೀವಾಸ್ತವ್ ಅಜೇಯ 1 ರನ್ ಗಳಿಸಿದರು.
ಇದಕ್ಕೂ ಮುನ್ನ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಮುಂಬೈ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಐದನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಮುಂಬೈ ತಂಡ 57.3 ಓವರ್‍ಗಳಲ್ಲಿ 269 ರನ್ ಗಳಿಗೆ ಆಲೌಟ್ ಆಯಿತು.
ಮುಂಬೈ ಪರ ನಾಯಕ ಪೃಥ್ವಿ ಶಾ 44ರನ್, ಗಾರ್ದಿಕ ತಾಮೋರ್ 25, ಅರ್ಮಾನ್ ಜಾಫಾರ್ 37, ಸುವೇದ್ ಪಾರ್ಕರ್ 51, ಯಶಸ್ವಿ ಜೈಸ್ವಾಲ್ 1, ರ್ಸಾರಾಜ್ ಖಾನ್ 45, ಶಾಮ್ಸ್ ಮುಲಾನಿ 17, ತನುಶ್ ಕೋಟ್ಯಾನ್ 11, ತುಷಾರ್ ದೇಶಪಾಂಡೆ 7, ಮೋಹಿತ ಅವಾಸ್ತಿ 15, ಧವಳ್ ಕುಲಕರ್ಣಿ ಅಜೇಯ 2 ರನ್ ಗಳಿಸಿದರು. ಮಧ್ಯ ಪ್ರದೇಶ ಪರ ಕುಮಾರ್ ಕಾರ್ತಿಕ್‍ಯೇಯಾ 4, ಗೌರವ್ ಯಾದವ್ ಹಾಗೂ ಪಾರ್ಥ ಸಾಹಾನಿ ತಲಾ 2 ವಿಕೆಟ್ ಪಡೆದರು.
ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸರ್ಫಾರಾಜ್ ಖಾನ್
ಮುಂಬೈ ತಂಡದ ಸರ್ಫಾರಾಜ್ ಖಾನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪ್ರಸಕ್ತ ರಣಜಿ ಟೂರ್ನಿಯಲ್ಲಿ ರ್ಸಾರಾಜ್ ಖಾನ್ 982 ರನ್ ಗಳಿಸಿದ್ದಾರೆ. ರನ್ ಮಳೆ ಸುರಿಸಿರುವ ಈ ಮುಂಬೈ ಬ್ಯಾಟರ್‍ಗೆ ರಾಷ್ಟ್ರೀಯ ಆಯ್ಕೆ ಸಮಿತಿ ಮುಂಬರುವ ಟೆಸ್ಟ್ ಪಂದ್ಯಗಳಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.
ಸಂಕ್ಷಿಪ್ತ ಸ್ಕೋರ್
ಮುಂಬೈ ಮೊದಲ ಇನ್ನಿಂಗ್ಸ್ 374
ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್ 536
ಮುಂಬೈ ಎರಡನೆ ಇನ್ನಿಂಗ್ಸ್ 269
ಮಧ್ಯ ಪ್ರದೇಶ ಎರಡನೆ ಇನ್ನಿಂಗ್ಸ್ 108/4
ಪಂದ್ಯ ಶ್ರೇಷ್ಠ: ಶುಭಂ ಶರ್ಮಾ
ಸರಣಿ ಶ್ರೇಷ್ಠ : ಸರ್ಫಾರಾಜ್ ಖಾನ್

