ಮಧ್ಯಪ್ರದೇಶ್ : ರೇವಾ ಜಿಲ್ಲೆಯ ಸೋಹಾಗೋ ಗ್ರಾಮದಲ್ಲಿ ದಲಿತ ಯುವಕನನ್ನು ಕಳ್ಳತನ ಮಾಡುವುದಕ್ಕೆ ಬಂದಿದ್ದನೆಂದು ಗ್ರಾಮಸ್ಥರು ಅವನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಕೊರಳಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಘಟನೆ ನಡೆದಿದೆ.
Locals beat a #Dalit youth with sticks, garland him with shoes and parade him in village in #Rewa#MadhyaPradesh pic.twitter.com/Z60JQaoQHS
— Free Press Madhya Pradesh (@FreePressMP) July 8, 2023
ಕೆಲವು ದಿನಗಳಿಂದ ಮಧ್ಯಪ್ರದೇಶದಲ್ಲಿ ಆದಿವಾಸಿ ಮತ್ತು ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಬಿಜೆಪಿ ಮುಖಂಡನೊಬ್ಬ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ನಡೆದಿದೆ ಆ ರಘಟನೆ ಮರೆಯುವ ಮುನ್ನವೇ ಈಗ ಮತ್ತೊಂದು ಘಟನೆ ನಡೆದಿದೆ.
ರೇವಾ ಜಿಲ್ಲೆಯ ಸೋಹಾಗೋ ಗ್ರಾಮದಲ್ಲಿ ದೇಶ್ ಪಾಲ್ ಸಿಂಗ್ ಮತ್ತು ಅವರ ಮಗ ಹರ ಓಂ ಸಿಂಗ್ ಎನ್ನುವವರು ಇಂದ್ರಜಿತ್ ಮಾಂಝಿ ಎನ್ನುವ ದಲಿತ ಯುವಕನನ್ನು ಕಳ್ಳತನ ಮಾಡಲು ಬಂದಿದ್ದನೆಂದು ಶಂಕಿಸಿ ಮನಬಂದತೆ ಥಳಿಸಿ ಚಪ್ಪಲಿ ಹಾಕಿ ಮೆರವಣಿಗೆ ಮಾಡಿರುವ ಘಟನೆ ನಡೆದಿದ್ದು ಇದರ ವಿರುದ್ದ ದೂರನ್ನು ದಾಖಲಿಸಲಾಗಿದೆ.
ಪೋಲಿಸರು ಅರೋಪಿಗಳ ಹುಡುಕಾಟದಲ್ಲಿದ್ದು ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲವೆಂದು ತಿಳಿಸಿದ್ದಾರೆ.
Sathyam Shivam : ಹಾಡಿನೊಂದಿಗೆ “ಸತ್ಯಂ ಶಿವಂ” ಚಿತ್ರದ ಚಿತ್ರೀಕರಣ ಮುಕ್ತಾಯ
Jain sage: ಜೈನ್ ಮುನಿಗಳಿಗೆ ರಕ್ಷಣೆಯೇ ಇಲ್ಲ: ನ್ಯಾಯ ಸಿಗುವವರೆಗೂ ಸಲ್ಲೇಖನ ವ್ರತವೆಂದು ಕಣ್ಣೀರು…!