Pakistan News: ಮೊಬೈಲ್ ಅನ್ನೋದು ಎಷ್ಟರ ಮಟ್ಟಿಗೆ ಮುಖ್ಯವಾಗಿ ಹೋಗಿದೆ ಅಂದ್ರೆ, ಒಂದು ಹೊತ್ತಿನ ಊಟವಾದ್ರೂ ಬಿಟ್ಟಾರು, ಆದ್ರೆ ಮೊಬೈಲ್ ಬಿಡಲ್ಲಾ ಅನ್ನೋ ರೀತಿ ಇಂದಿನ ಯುವ ಪೀಳಿಗೆ ವರ್ತಿಸುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ವೃದ್ಧವರೆಗೂ ಎಲ್ಲರೂ ಮೊಬೈಲ್ ಪ್ರಿಯರೇ. ಮೊದಲೆಲ್ಲ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿದ್ರೆ ಹೀಗಾಗತ್ತೆ, ಹಾಗಾಗತ್ತೆ ಅಂತಾ ಬುದ್ಧಿ ಹೇಳ್ತಿದ್ದ ತಂದೆ ತಾಯಿ, ಈಗ ಕನ್ನಡಕ ಹಾಕಿ ಸ್ವೈಪ್ ಮಾಡೋ ಸ್ಟೈಲೇ ಬೇರೆ.
ಇನ್ನು ಎಷ್ಟೋ ಮಕ್ಕಳು ಮೊಬೈಲ್ ಕೊಡಿಸಿಲ್ಲಾ ಅಂದ್ರೆ, ಊಟ ಬಿಡ್ತೀನಿ, ಮನೆ ಬಿಡ್ತೀನಿ, ಕೊನೆಗೆ ಜೀವಾನೇ ಬಿಡ್ತೀನಿ ಅಂತಾ ಹಠ ಮಾಡುವ ರೇಂಜಿಗೆ ಬೆಳೆದಿದ್ದಾರೆ. ಅವರ ಹಠಕ್ಕೆ ಮಣಿದು ಎಷ್ಟೋ ಪಾಪದ ತಂದೆ ತಾಯಿಗಳು, ಸಾಲ ಮಾಡಿ, ಅಥವಾ ಮನೆಯಲ್ಲಿರುವ ವಸ್ತುಗಳನ್ನು ಮಾರಿ, ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ.
ಆದರೆ ಮೊಬೈಲ್ ಅನ್ನೋದು ನಾಸ್ತಿಕರು ಕಂಡುಹಿಡಿದಿರುವ ವಸ್ತು. ನಾವು ಅದನ್ನು ಬಳಸಬಾರದು ಎಂದು, ಮದರಸಾ ಒಂದರಲ್ಲಿ ಗುರುಗಳು, ಮಕ್ಕಳ ಎದುರೇ ಸ್ಮಾರ್ಟ್ ಫೋನ್ ಒಂದನ್ನು ಜಜ್ಜಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಒಂದೋ ಎರಡೋ ಫೋನ್ ಒಡೆದು ಹಾಕಿದ್ರೆ, ಉದಾಹರಣೆಗಾಗಿ ಒಡೆದಿದ್ದಾರೆ ಅನ್ನಬಹುದು. ಆದರೆ ಮದರಸಾದಲ್ಲಿ ಎಷ್ಟು ಮಕ್ಕಳು ಮೊಬೈಲ್ ಬಳಸುತ್ತಾರೋ. ಆ ಎಲ್ಲಾ ಮಕ್ಕಳ ಫೋನನ್ನು ಸಾಲಾಗಿ ಸುತ್ತಿಗೆಯಿಂದ ಒಡೆದು ಹಾಕಿದ್ದಾರೆ.
ಇಂಥಾ ಕೆಲಸ ಮಾಡುವ ಮದರಸಾ ಗುರುಗಳು ಇರುವ ದೇಶ ಯಾವುದು ಅಂತಾ ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಈ ಘಟನೆ ನಡೆದಿದ್ದು ಪಾಕಿಸ್ತಾನದ ಮದರಸಾ ಒಂದರಲ್ಲಿ. ಇದು ನಾಸ್ತಿಕರು ಮಾಡಿರುವ ಆವಿಷ್ಕಾರ. ನಾವು ಅಲ್ಲಾನನ್ನು ನಂಬುವವರು. ಹಾಗಾಗಿ ನಾಸ್ತಿಕರ ಆವಿಷ್ಕಾರವನ್ನು ನಾವು ಬಳಸಬಾರದು ಎಂದು ಸುತ್ತಿಗೆ ತೆಗೆದುಕೊಂಡು, ವಿದ್ಯಾರ್ಥಿಗಳ ಸ್ಮಾರ್ಟ್ ಫೋನನ್ನು ಸಾಲಾಗಿ ಒಡೆದು ಹಾಕಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಕ್ಕೆ, ತರಹೇವಾರಿ ಕಾಮೆಂಟ್ಸ್ ಬಂದಿದೆ. ಮೊಬೈಲ್ ಬಳಸಬಾರದು ಅಂದ್ರೆ, ಈ ದೃಶ್ಯವನ್ನು ಯಾಕೆ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಹರಿಬಿಡಲಾಗಿದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇವರು ಹಳೆಯ ಕಾಲಕ್ಕೆ ಹಿಂದಿರುಗುತ್ತಿದ್ದಾರೆಂದು ಹೇಳಿದ್ದಾರೆ. ಮತ್ತೊಬ್ಬರು ಟಿವಿ ನೋಡುವುದು, ಮೊಬೈಲ್ ಬಳಸುವುದು ಇಸ್ಲಾಂಮಿನಲ್ಲಿ ಹರಾಮ್ ಎಂದು ಹೇಳಿದ್ದಾರೆ.
Imam in Pakistan smashes students phones because phones are 'infidel inventions' pic.twitter.com/FBB2vQHmu4
— Europe Invasion (@EuropeInvasionn) September 8, 2024