Tuesday, October 14, 2025

Latest Posts

ಕೈ ಕೊಟ್ಟ ‘ಸರ್ವರ್’ – ರೊಚ್ಚಿಗೆದ್ದ ಅಭ್ಯರ್ಥಿಗಳು, SSC ಪರೀಕ್ಷೆ ವೇಳೆ ಮಹಾ ಯಡವಟ್ಟು!

- Advertisement -

ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರಿ ನೌಕರಿಯ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳು ವರ್ಷ ವರ್ಷ ಪರೀಕ್ಷೆಗಳಿಗೆ ತಯಾರಿ ಮಾಡುತ್ತಾರೆ. ಆದರೆ ಕೆಲವು ಕ್ಷಣದಲ್ಲಿ ಅವರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕೆಲವು ಪರೀಕ್ಷಾ ಕೇಂದ್ರಗಳು ಈ ಕನಸಿಗೆ ತಣ್ಣೀರು ಎರಚುತ್ತಿವೆ. ಹೌದು ಇಂತಹದ್ದೇ ಒಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ SSC ಅಂದ್ರೆ Staff Selection Commission ಆನ್ ಲೈನ್ ಪರೀಕ್ಷೆ, ರಾತ್ರಿ ಹತ್ತು ಗಂಟೆಯಾದರೂ ಆರಂಭವಾಗಿಲ್ಲ. ಪರೀಕ್ಷೆ ವೇಳೆ ವಿದ್ಯುತ್ ಮತ್ತು ಸರ್ವರ್‌ ಕೈಕೊಟ್ಟಿದೆ.

ಹಲವಾರು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಹೊರಗಡೆ ನಿರೀಕ್ಷೆಯಲ್ಲಿದ್ದರು. ಕೇವಲ ಇಲ್ಲಿ ತಾಂತ್ರಿಕ ದೋಷವಲ್ಲ, ಇಲ್ಲಿ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ವಿದ್ಯುತ್ ಸಂಪರ್ಕ ಕೈಕೊಟ್ಟಿದೆ, ಸರ್ವರ್ ಡೌನ್‌ ಆಗಿದೆ – ಎಲ್ಲದಕ್ಕೂ ಮೀರಿ ಸಮಸ್ಯೆ ಪರಿಹರಿಸಲು ಯಾವುದೇ ಅಧಿಕಾರಿ ಇಲ್ಲ.

ಇಂತಹ ದೊಡ್ಡ ಎಕ್ಸಾಮ್ ನಡೆಸೋಕೆ ಇಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ಬಾರಿ ಬಾರಿ ಇಂತಹ ಅವ್ಯವಸ್ಥೆ ಆಗ್ತಾ ಇದೆ. ಅಧಿಕಾರಿಗಳು ಮಾತ್ರ ವೀಕ್ಷಕರಾಗಿ ನಿಂತಿದ್ದಾರೆ. ದೂರ, ದೂರಿನಿಂದ ಬಂದಂತಹ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಪರೀಕ್ಷಾ ಕೇಂದ್ರ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ತೋರುತ್ತಿದೆ.

ರಾತ್ರಿ ಹತ್ತೂ ಮೀರಿದ್ರೂ ಪರೀಕ್ಷೆ ಆರಂಭವಾಗದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಅಭ್ಯರ್ಥಿಗಳು ಹೊರಗೆ ಬಂದು ಕೇಂದ್ರದ ಎದುರು ಪ್ರತಿಭಟನೆಗೆ ಕೈ ಹಾಕಿದ್ದಾರೆ. ನಮ್ಮ ಭವಿಷ್ಯ ಹಾಳು ಮಾಡಬೇಡಿ, ಪರೀಕ್ಷೆ ಹೇಗೆ ಮುಂದೂಡುತ್ತಾರೆ? ಅಂತ ಘೋಷಣೆ ಕೂಗಿದ್ದಾರೆ.

ನೂರಾರು ಅಭ್ಯರ್ಥಿಗಳ ಶ್ರಮ, ಸಮಯ ಮತ್ತು ಕನಸುಗಳು ಈ ಒಂದು ಯಡವಟ್ಟಿನಿಂದ ಹಾಳಾಗಬಹುದು. ಸರ್ಕಾರ ಹಾಗೂ ಕೇಂದ್ರದ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು, ಇಲ್ಲವಾದರೆ ಇದು ಮತ್ತಷ್ಟು ಪ್ರತಿಭಟನೆಗಳಿಗೆ ಕಾರಣವಾಗಬಹುದಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss