Mahabharat: ನಾವು ಈ ಮುನ್ನ ನಿಮಗೆ ಯುಧಿಷ್ಠಿರನೇಕೆ ದ್ರೌಪದಿಯನ್ನು ಪಗಡೆಯಾಡುವಾಗ ಪಣಕ್ಕಿರಿಸಿದ..? ಶ್ರೀಕೃಷ್ಣ ಏಕೆ ಇದನ್ನು ತಡೆಯಲಿಲ್ಲ ಎನ್ನುವ ಬಗ್ಗೆ ವಿವರಿಸಿದ್ದೇವೆ. ಇದೀಗ ವಸ್ತ್ರಾಪಹರಣದ ವೇಳೆ ದ್ರೌಪದಿಯ ಮಾನ ಉಳಿಯಲು ಕಾರಣವೇನು ಅಂತಾ ಹೇಳಲಿದ್ದೇವೆ.
ದ್ರೌಪದಿ ತನ್ನ ಜೀವನದಲ್ಲಿ ಮಾಡಿದ ಪುಣ್ಯ ಕಾರ್ಯದಿಂದಲೇ, ತುಂಬಿದ ಸಭೆಯಲ್ಲಿ ಆಕೆಯ ಮಾನ ಉಳಿದಿದ್ದು. ಹಾಗಾದ್ರೆ ಆಕೆ ಮಾಡಿದ ಪುಣ್ಯ ಕಾರ್ಯವೇನು ಅಂತಾ ನೋಡುವುದಾದರೆ, ಗಂಗಾ ನದಿಯಲ್ಲಿ ಆಕೆ ಸ್ನಾನ ಮಾಡುವಾಗ, ಓರ್ವ ವೃದ್ಧ ಕೂಡ ಅಲ್ಲಿ ಸ್ನಾನಕ್ಕೆ ಬರುತ್ತಾನೆ.
ನದಿಯ ರಭಸಕ್ಕೆ ವೃದ್ಧ ಧರಿಸಿದ್ದ ಉಡುಪು ಕೊಚ್ಚಿ ಹೋಗುತ್ತದೆ. ಆ ಸಂದರ್ಭದಲ್ಲಿ ಆತ ತನ್ನ ಮಾನ ಮುಚ್ಚಿಕೊಳ್ಳಲು ಗಿಡದ ಬಳಿ ಹೋಗಿ ನಿಲ್ಲುತ್ತಾನೆ. ಇದನ್ನು ಗಮನಿಸಿದ ದ್ರೌಪದಿ, ಆಕೆಯ ಸೀರೆಯ ಸ್ವಲ್ಪ ಭಾಗದಲನ್ನು ಹರಿದು, ಆ ವೃದ್ಧನಿಗೆ ನೀಡಿ ಮಾನ ಮುಚ್ಚಿಕೊಳ್ಳಲು ಹೇಳುತ್ತಾಳೆ. ಆಗ ವೃದ್ಧ ನಿನಗೆ ಯಾವಾಗಲೂ ಒಳ್ಳೆಯದಾಗಲಿ. ನೀ ಮಾಡಿದ ಸಹಾಯದ ಪುಣ್ಯ ಪಲ ನಿನಗೆ ಸಿಗಲಿ ಎಂದು ಆಶೀರ್ವದಿಸುತ್ತಾನೆ.
ಎರಡನೇಯದಾಗಿ ಶ್ರೀಕೃಷ್ಣ ಶಿಶುಪಾಲನಿಗೆ ಸುದರ್ಶನ ಚಕ್ರದಿಂದ ಸಂಹರಿಸಿದಾಗ, ಶ್ರೀಕೃಷ್ಣನ ಬೆರಳಿಗೆ ರಕ್ತ ಬರುತ್ತಿರುತ್ತದೆ. ಆಗ ದ್ರೌಪದಿ ತನ್ನ ಸೀರೆ ಹರಿದು, ಶ್ರೀಕೃಷ್ಣನ ಬೆರಳಿಗೆ ಸುತ್ತಿ ಆರೈಕೆ ಮಾಡುತ್ತಾಳೆ. ಈ ವೇಳೆ ಅವರಿಬ್ಬರು ಸಹೋದರ ಸಹೋದರಿಯಂತಾಗುತ್ತಾರೆ. ಹಾಗಾಗಿಯೇ ಶ್ರೀಕೃಷ್ಣ ವಸ್ತ್ರಾಪಹರಣದ ವೇಳೆ ಸಹೋದರಿ ಕರೆದಾಗ, ಬಂದು ಸೀರೆಯನ್ನು ಅಕ್ಷಯವನ್ನಾಗಿ ಮಾಡಿ, ಆಕೆಯ ಮಾನ ಉಳಿಸುತ್ತಾನೆ.