Mahabharatha: ಮಹಾಭಾರತದಲ್ಲಿ ಬರುವ ಹಲವು ಪಾತ್ರಗಳಲ್ಲಿ ಗಾಂಧಾರಿ ಪಾತ್ರ ಕೂಡ ಪ್ರಮುಖ. ಇಂಥ ಗಾಂಧಾರಿ ಮಹಾಭಾರತ ಯುದ್ಧವಾದ ಬಳಿಕ ಇಬ್ಬರು ಪ್ರಮುಖರಿಗೆ ಶಾಪ ನೀಡಿದ್ದಳು. ಹಾಗಾದ್ರೆ ಗಾಂಧಾರಿ, ಯಾರಿಗೆ ಮತ್ತು ಯಾಕೆ ಶಾಪ ನೀಡಿದ್ದಳು ಅಂತಾ ತಿಳಿಯೋಣ ಬನ್ನಿ..
ಆಕೆಯ ಮೊದಲ ಶಾಪ ಶಕುನಿಗೆ ಆಗಿತ್ತು. ಶಕುನಿ ಗಾಂಧಾರಿಯ ಸ್ವಂತ ಅಣ್ಣನಾಗಿದ್ದ. ಗಾಂಧಾರ ದೇಶದ ರಾಜನಾಗಿದ್ದ. ಆದರೆ ಮಹಾಭಾರತ ಯುದ್ಧವಾಗಲು ಪ್ರಮುಖ ಕಾರಣವೇ ಶಕುನಿಯಾಗಿದ್ದ. ಶಕುನಿ ತನ್ನ ಸ್ವಾರ್ಥಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ಜಗಳ ಮಾಡಿಸಿ, ಮಹಾಭಾರತ ಯುದ್ಧಕ್ಕೆ ಕಾರಣನಾಗಿದ್ದ.
ಹಾಗಾಗಿ ಶಕುನಿಯ ಈ ಕೃತ್ಯಕ್ಕಾಗಿ ಗಾಂಧಾರಿ ಶಕುನಿಯ ವಂಶ ನಿರ್ವಂಶವಾಗಲಿ ಮತ್ತು ಅವನ ರಾಜ್ಯ ಅನಾಥವಾಗಲಿ ಎಂದು ಶಾಪ ನೀಡಿದ್ದಳು. ಹಾಗಾಗಿಯೇ ಶಕುನಿ ಮರಣದ ಬಳಿಕ, ಅವನ ವಂಶ ನಿರ್ವಂಶವಾಯಿತು. ಅಂದಿನ ಗಾಂಧಾರವೇ ಇಂದಿನ ಅಫ್ಗಾನಿಸ್ಥಾನ. ಗಾಂಧಾರ ದೇಶ ಈಗಲೂ ಆಕೆಯ ಶಾಪದಿಂದ, ಬಡ ದೇಶವಾಗಿಯೇ ಉಳಿದಿದೆ. ಅಲ್ಲಿನ ನಾಗರಿಕರಿಗೆ ನಾಗರಿಕತೆಯೇ ಇಲ್ಲದಂತಿದ್ದಾರೆ.
ಇನ್ನು ಎರಡನೇಯ ಶಾಪ ಶ್ರೀಕೃಷ್ಣನಿಗೆ. ಶ್ರೀಕೃಷ್ಣ ಮಹಾಭಾರತದಲ್ಲಿ ಪಾಂಡವರ ಪರ ನಿಂತು, ಅವರಿಗೆ ಸಹಾಯ ಮಾಡಿ, ಕೌರವರ ಸಂಹಾರ ಆಗುವಂತೆ ಮಾಡಿದ. ಅಲ್ಲದೇ ಗಾಂಧಾರಿಯ ನೂರು ಮಕ್ಕಳು ಸಾಯುವಂತೆ ಮಾಡಿದನೆಂದು ಶ್ರೀಕೃಷ್ಣನಿಗೆ ಗಾಂಧಾರಿ ಶಾಪ ನೀಡಿದಳು. ನಿನ್ನ ವಂಶವೂ ನಿರ್ವಂಶವಾಗಲಿ, ನಿನ್ನವರು ಬಡಿದಾಡಿಕ“ಂಡು ಸಾಯಲಿ, ನೀನು ಏಕಾಂಗಿಯಾಗಿ ಸಾಯು ಎಂದು ಕೃಷ್ಣನಿಗೆ ಗಾಂಧಾರಿ ಶಾಪ ನೀಡಿದಳು.
ಇನ್ನು ಪಾಂಡವರಿಗೇಕೆ ಗಾಂಧಾರಿ ಶಾಪ ನೀಡಲಿಲ್ಲವೆಂದರೆ, ಮಹಾಭಾರತ ಯುದ್ಧದ ಬಳಿಕ ಯುಧಿಷ್ಠಿರ ಗಾಂಧಾರಿಯಲ್ಲಿ ಬಂದು ಕ್ಷಮೆಯಾಚಿಸಿದ್ದ. ಹೀಗಾಗಿ ಗಾಂಧಾರಿ ಪಾಂಡವರಿಗೆ ಶಾಪ ನೀಡಿರಲಿಲ್ಲ.
ಯಾಕೆ ಕೌರವರು ಸಾವನ್ನಪ್ಪಿದರು ಎಂಬ ಪ್ರಶ್ನೆಗೆ ಉತ್ತರ, ಧೃತರಾಷ್ಟ್ರ 50 ಜನ್ಮದ ಹಿಂದೆ ಬೇಟೆಗಾರನಾಗಿದ್ದ. ಈ ವೇಳೆ ಓರ್ವ ತಂದೆ ಪಕ್ಷಿಯ ಎದುರು, ಅದರ 100 ಮರಿಗಳನ್ನು ಬೇಟೆಯಾಡಿದ್ದ. ಆಗ ಆ ತಂದೆ ಪಕ್ಷಿ ಮಕ್ಕಳ ಸಾವನ್ನು ಕಂಡು ದುಃಖಿಸಿತ್ತು. ಆ ರೀತಿ ಪುಣ್ಯ ಸಂಪಾದನೆ ಮಾಡಿ, ನೂರು ಮಕ್ಕಳನ್ನು ಪಡೆಯುವ ಭಾಗ್ಯ ಧೃತರಾಷ್ಟ್‌ರನಿಗೆ ದ್ವಾಪರ ಯುಗದಲ್ಲಿ ಬಂದಿತ್ತು. ಹಾಗಾಗಿ 100 ಮಕ್ಕಳ ಪಡೆಯುವ ಪುಣ್ಯದ ಫಲ. ಮತ್ತು ಮಹಾಭಾರತ ಯುದ್ಧದಲ್ಲಿ ಅವರ ಸಾವನ್ನು ಕಾಣುವ ಪಾಪದ ಫಲ ಎರಡನ್ನೂ 1 ಜನ್ಮದಲ್ಲಿ ಪಡೆದಿದ್ದ.