Thursday, November 21, 2024

Latest Posts

ಮಹದಾಯಿ ಬೇಡಿಕೆ ಮುಂದಿನ ವರ್ಷದೊಳಗೆ ಈಡೇರಬೇಕು: ಕೋನರೆಡ್ಡಿ ಆಗ್ರಹ

- Advertisement -

Dharwad News: ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿದ್ದು, ನಮ್ಮದು ಹೋರಾಟದ ಕಿಚ್ಚಿನ ನಾಡು. ಮಹದಾಯಿ ಮುಂದಿನ ವರ್ಷದೊಳಗೆ ಆಗಬೇಕು. ಇದಕ್ಕಾಗಿ ನಾವು ಹೋರಾಟದ ಸಂಕಲ್ಪ ಮಾಡುತ್ತೇವೆ. ವನ್ಯಜೀವಿ ಮಂಡಳಿ ನೆಪ ಕೇಂದ್ರ ಸರ್ಕಾರ ಹೇಳುತ್ತಿದೆ. ರಾಜ್ಯದ ಎಲ್ಲ ಸಂಸದರಿಗೂ ಮನವಿ ಮಾಡಿಕೊಳ್ಳುತ್ತೇವೆ.

ಹಿಂದೆ ದಿ‌‌. ಅನಂತಕುಮಾರ ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಒತ್ತಡ ಹಾಕುತ್ತಿದ್ದರು. ಈಗ ಆ ಜವಾಬ್ದಾರಿ ಪ್ರಹ್ಲಾದ ಜೋಶಿ ತೆಗೆದುಕೊಳ್ಳಬೇಕು. ಮಹದಾಯಿಗೆ ಕ್ಲಿಯರೆನ್ಸ್ ಕೊಡಿಸುವ ಕಾರ್ಯ ಮಾಡಬೇಕು. ಕೇಂದ್ರ ಸರಕಾರ ಯೋಜನೆ ಜಾರಿ ಮಾಡಬೇಕು ಅಂತ ಮನಸ್ಸು ಮಾಡಿದ್ರೆ ಒಂದು ತಿಂಗಳಲ್ಲಿ ಕೆಲಸ ಆಗುತ್ತೆ, ಮನೆ ಪರಿಹಾರ ಕಡಿಮೆ ಮಾಡಿರುವ ವಿಚಾರವಾಗಿ, ಸಿಎಂ ಇನ್ನು ಯಾವುದೆ ತಿರ್ಮಾನ ತಗೊಂಡಿಲ್ಲ.

ಬಿಜೆಪಿ ಒಂದು ವಾರ ಬರಿ ವಾಲ್ಮಿಕಿ ಹಗರಣ ವಿವಾರವಾಗಿ ಬರಿ ಗದ್ದಲ ಮಾಡಿದ್ದಾರೆ. ಸಾಕಷ್ಟು ಸ್ವಲಂತ ಸಮಸ್ಯಗಳು ಇವೆ, ಅದರ ಬಗ್ಗೆ ಬಿಜೆಪಿ ಅವರು ಹೋರಾಟ ಮಾಡಲಿ, ಮಳೆ ಬಹಳ ಆಗ್ತಾ ಇದೆ ನಮಗೆ ಎನ್ ಪರಿಹಾರ ಕೊಡಬೇಕು ಎಂಬುದರ ಬಗ್ಗೆ ಸಲಹೆ ಕೊಡಬೇಕು ಎಂದು ಕೋನರೆಡ್ಡಿ ಹೇಳಿದ್ದಾರೆ.

- Advertisement -

Latest Posts

Don't Miss