Wednesday, April 16, 2025

Latest Posts

ಯಡಿಯೂರಪ್ಪ ಹುಟ್ಟುಹಬ್ಬದಂದೇ ರಾಜ್ಯಕ್ಕೆ ಮೋದಿ ಗಿಫ್ಟ್..!

- Advertisement -

ಕರ್ನಾಟಕ ಟಿವಿ : ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ.. ದಶಕಗಳಿಂದ ರಾಜ್ಯದಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಿದ್ದ  ಮಹಾದಾಯಿ ವಿವಾದಕ್ಕೆ ತೆರೆ ಬಿದ್ದಿದೆ.. ಮಹಾದಾಯಿ ಯೋಜನೆ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.. ಮೊನ್ನೆಯಷ್ಟೆ ದೆಹಲಿಗೆ ತೆರಳಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಿಎಂ ಯಡಿಯೂರಪ್ಪ ಸಲಹೆ ಮೇರೆಗೆ ದೆಹಲಿಗೆ ತೆರಳಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಮನವಿ ಸಲ್ಲಿಸಿ ಬಂದಿದ್ರು.  ಇದೀಗ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕರ್ನಾಟಕ ತನ್ನ ಪಾಲಿನ  13.05 ಟಿಎಂಸಿ ನೀರನ್ನ ಬಳಸಿಕೊಳ್ಳಬಹುದಾಗಿದೆ..  ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇರುವ ಹಿನ್ನೆಲೆ ಕಮಲ ಪಕ್ಷದ ನಾಯಕರಿಗೆ ಮಹಾದಾಯಿ ವಿವಾದ ಬಗೆಹರಿಸಬೇಕಾದ ಜವಾಬ್ದಾರಿ ಇತ್ತು.. ಇದೀಗ ಕೆಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವ ಹಿನ್ನೆಲೆ ಉತ್ತರ ಕರ್ನಾಟಕ ಬಿಜೆಪಿ ನಾಯಕರು ನಿರಾಳರಾಗಿದ್ದಾರೆ..

https://www.youtube.com/watch?v=_XmX3asIYOU
- Advertisement -

Latest Posts

Don't Miss