ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಟಗೇರಾವಾಡಿ ಗ್ರಾಮದಲ್ಲಿ ಮಹಾಲಕ್ಷ್ಮೀ ಜಾತ್ರೆಯ ಮೆರವಣಿಗೆ ವೇಳೆ ಯುವಕರ 2 ಗುಂಪಿನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದೇ ವೇಳೆ ಗಲಾಟೆ ಬಿಡಿಸಲು ಹೋದ ಪೊಲೀಸರು ಹಾಗೂ ಪೊಲೀಸ್ ವಾಹನದ ಮೇಲೆ ಯುವಕರು ಕಲ್ಲು ತೂರಾಟ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಬುಧವಾರ ರಾತ್ರಿ ಘಟನೆ ನಡೆದಿತ್ತು.
ಜಾತ್ರೆ ವೇಳೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದೆ. ಗಲಾಟೆ ತಡೆಯಲು ಹೊದ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ಮಾಡಲು ಯುವಕರು ಮುಂದಾಗಿದ್ದಾರೆ. ಇದೇ ವೇಳೆ ಕಲ್ಲು ತೂರಾಟವನ್ನೂ ಮಾಡಿದ್ದಾರೆ. ಕಲ್ಲೂ ತೂರಾಟದಲ್ಲಿ ಇಬ್ಬರು ಕಾನ್ಸ್ಟೇಬಲ್ಗಳಿಗೆ ಸಣ್ಣ ಪುಟ್ಟಗಾಯಗಳಾಗಿವೆ.
ಘಟನೆ ಸಂಬಂಧ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿ ಕಚ್ಚಿದಕ್ಕೆ ಠಾಣೆಗೆ ದೂರು; ಕೋಪಕ್ಕೆ ಬೈಕ್‌ಗಳನ್ನೇ ಸುಟ್ಟು ಹಾಕಿ ನಾಯಿ ಮಾಲೀಕ
Collage Student : ಮಧ್ಯಾಹ್ನ ಊಟ ಮುಗಿಸಿ ಹಾಸ್ಟೆಲ್ ಸೇರಿದ ತುಮಕೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು
Droupadi Murmu : ಇಂದು ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

