Friday, December 27, 2024

Latest Posts

ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಚಾಲನೆ: ಚುಟುಕು ಮಹಾ ಸಮರದ ಲಾಂಛನ ಅನಾವರಣ  

- Advertisement -

ಬೆಂಗಳೂರು: ಯುವ ಆಟಗಾರರಿಗೆ ಉತ್ತಮ ಅವಕಾಶ ಕೊಡುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಮಹಾರಾಜ ಟ್ರೋಫಿ ಟಿ20 ಟೂರ್ನಿಯನ್ನು ಆಯೋಜಿಸಿದೆ.

ಶನಿವಾರ ಕೆಎಸ್‍ಸಿಎಯಲ್ಲಿ ಲಾಂಛನ ಹಾಗೂ ಟ್ರೋಫಿಯನ್ನು ಅದ್ದೂರಿಯಾಗಿ ಅನಾವರನಗೊಳಿಸಲಾಯಿತು. ಸಮಾರಂಭ ಉದ್ದೇಶಿಸಿ ಮಾತನಾಡಿದ ಕೆಎಸ್‍ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಕೊರೋನಾದಿಂದಾಗಿ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ.

ಕೆಎಸ್‍ಸಿಎ ಆಟಗಾರರನ್ನು ಎಂದಿಗೂ ಕೈಬಿಡುವುದಿಲ್ಲ. ಚಿಕ್ಕ ಚಿಕ್ಕ ಊರುಗಳಿಂದ ಬಂದು ಕ್ರಿಕೆಟ್ ಆಡಿದವರ ಸಂಖ್ಯೆ ಹೆಚ್ಚಿದೆ. ಯುವ ಆಟಗಾರರಿಗೆ ಅವಕಾಶ ಕೊಡುವುದಕ್ಕಾಗಿ ಮಹಾರಾಜ ಟ್ರೋಫಿ ಎಂದರು.

ಕೆಎಸ್‍ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನಾನ್ ಮಾತನಾಡಿ, ಮಹಾರಾಜ ಟಿ20 ಟ್ರೋಫಿ ಆ.7ರಿಂದ ಆ.26ರವರೆಗೆ ನಡೆಯಲಿದೆ.

ಮೊದಲ ಹಂತದ ಪಂದ್ಯಗಳು ಮೈಸೂರಿನಲ್ಲಿ  18 ಪಂದ್ಯಗಳು ನಡೆಯಲಿದ್ದು  ನಂತರದ ಫೈನಲ್ ಸೇರಿ 16 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.  ತಂಡಗಳಿಗೆ ನಾಯಕ, ಉಪನಾಯಕ ಹಾಗೂ ಸಹಾಯಕ ಸಿಬ್ಬಂದಿಯನ್ನು ಕೆಎಸ್‍ಸಿಎ ನೇಮಕ ಮಾಡಲಿದೆ ಎಂದರು.

ಕೆಎಸ್‍ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ಆಡುವ ಹನ್ನೊಂದರ ಆಯ್ಕೆ ಅಥವಾ ಆಟಕ್ಕೆ ಸಂಬಂಧಿಸಿದ ವಿಷಯದಲ್ಲಿ ಪ್ರಾಯೋಜಕರ ಹಸ್ತಕ್ಷೇಪವಿರುವುದಿಲ್ಲ. ವ್ಯಾವಹಾರಿಕ ಮತ್ತು ಕ್ರಿಕೆಟ್ ಸಂಬಂಧಿಸಿದ ವಿಷಯಗಳು ಕೆಎಸ್‍ಸಿಎಗೆ ಸೇರುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ  ಕೆಎಸ್‍ಸಿಎ  ಜಂಟಿ ಕಾರ್ಯದರ್ಶಿ ಶಾವಿರ್ ತಾರಾಪೊರ್, ಸಂಸ್ಥೆಯ ಉಪಾಧ್ಯಾಕ್ಷ ಜೆ.ಅಭಿರಾಮ್ ಉಪಸ್ಥಿತರಿದ್ದರು.

ಬಿಬಿಎಲ್ ಮಾದರಿಯಲ್ಲಿ ನಡೆಯಲಿದೆ ಮಹಾರಾಜ ಟ್ರೋಫಿ

ಮಹಾರಾಜ ಟ್ರೋಫಿ ಟಿ20 ಟೂರ್ನಿಯೂ ಬಿಗ್ ಬ್ಯಾಶ್ ಲೀಗ್ ಮಾದರಿಯಲ್ಲಿ ನಡೆಯಲಿದೆ.  ಫ್ರಾಂಚೈಸಿಗಳ ಮಾದರಿ ಬದಲು ಪ್ರಾಯೋಜತ್ವ ಮಾದರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಪ್ರಾಯೋಜಕರ ಹಸ್ತಕ್ಷೇಪವಿರುವುದಿಲ್ಲ.

ಆಟಗಾರರಿಗೆ ಒತ್ತಡ ಹಾಕುವಂತೆಯೂ ಇಲ್ಲ. ಕರಡು ಮಾದರಿಯಲ್ಲಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಬೆಂಗಳೂರು, ಮಂಗಳೂರು,ಮೈಸೂರು, ಶಿವಮೊಗ್ಗ, ಹುಬ್ಬಳ್ಳಿಘಿ, ರಾಯಚೂರು ಎಂದು 6 ತಂಡಗಳನ್ನು ರಚಿಸಲಾಗಿದೆ.

ಕೋರ್ ಗುಂಪುಗಳನ್ನು ರಚಿಸಲಾಗಿದ್ದು ಪ್ರತಿ ತಂಡಕ್ಕೆ 6 ತರಬೇತುದಾರ ಮತ್ತು ಸಿಬ್ಬಂದಿಗಳನ್ನು ಕೆಎಸ್‍ಸಿಎ ನೇಮಕ ಮಾಡಿದ್ದು ಆಟಗಾರರನ್ನು ಇವರು ಖರೀದಿ ಮಾಡಲಿದ್ದಾರೆ. ಐಪಿಎಲ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ.

 

- Advertisement -

Latest Posts

Don't Miss