- Advertisement -
Maharashtra: ಸಮಯಕ್ಕೆ ಸರಿಯಾಗಿ ಬಸ್ ಬರಲಿಲ್ಲ ಅಂದ್ರೆ ನಾವು ನೀವೆಲ್ಲ ಯಾವುದಾದರೂ ವೆಹಿಕಲ್ ಹತ್ತಿನೋ, ಬೇರೆ ಬಸ್ ಹತ್ತಿನೋ, ಅಥವಾ ಬಸ್ ಬರೋ ತನಕ ಕಾದೋ, ಹೋಗುತ್ತೇವೆ. ಆದ್ರೆ ಇಲ್ಲೋರ್ವ ಬಾಲಕ ಹಾಗಲ್ಲ. ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲವೆಂದು, ಕುದುರೆ ಏರಿ, ಶಾಲೆಗೆ ಹೋಗುತ್ತಾನೆ.
ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಬಾರ್ಷಿ ತಾಲೂಕಿನ ವ್ಯರಾಗ್ ಪಟ್ಟಣದ 9 ವರ್ಷದ ಆದರ್ಶ ಸಾಳುಂಕೆ ಎಂಬ ಬಾಲಕ, ಸರಿಯಾದ ಸಮಯಕ್ಕೆ ಬಸ್ ಬರುವುದಿಲ್ಲವೆಂದು, ಕುದುರೆ ಏರಿ ಶಾಲೆಗೆ ಹೋಗುತ್ತಾನೆ.
ಇನ್ನು ಈತನಿಗೆ ಕುದುರೆ ಎಲ್ಲಿ ಸಿಕ್ಕಿತು ಅಂತಾ ಕೇಳಿದ್ರೆ, ಈತನ ಅಜ್ಜನ ಬಳಿ 7 ಕುದುರೆಗಳಿದೆಯಂತೆ. ಆ ಕುದುರೆಯಲ್ಲಿ 1 ಕುದುರೆ ಏರಿ ಈ ಬಾಲಕ ಶಾಲೆಗೆ ಹೋಗುತ್ತಾನೆ.
- Advertisement -