Maharashtra: ಬಾರಾಮತಿಯಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಮಹಾರಾಷ್ಟ್ರದ ಡಿಸಿಎಂ ಅಜೀತ್ ಪವಾರ್ ಇದ್ದ ವಿಮಾನ ಪತನವಾಗಿದ್ದು, ಅಜೀತ್ ಪವಾರ್ ಸಾವನ್ನಪ್ಪಿದ್ದಾರೆ.
ತಾಂತ್ರಿಕ ದೋಷವಿದ್ದ ಕಾರಣ, ತುರ್ತು ಭೂ ಸ್ಪರ್ಶ ಮಾಡಲು ಹೋಗಿ, ಈ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯ ಚುನಾವಣಾ ಸಭೆ ನಿಮಿತ್ತ ಅಜೀತ್ ಪವಾರ್ ಆ ಸಭೆ ಮುಗಿಸಿ ಬರುವಾಗ, ಬಾರಾಮತಿಯಲ್ಲಿ ತುರ್ತು ಭೂ ಸ್ಪರ್ಶ ಮಾಡುವ ವೇಳೆ ವಿಮಾನ ಪತನವಾಗಿದ್ದು, ಈ ವಿಮಾನದಲ್ಲಿ ಡಿಸಿಎಂ ಅಜೀತ್ ಪವಾರ್ ಅವರ ಬಾಡಿಗಾರ್ಡ್ ಸೇರಿ 6ರಿಂದ 7 ಜನರಿದ್ದರು.
ವರದಿಗಳ ಪ್ರಕಾರ ವಿಮಾನದಲ್ಲಿದ್ದ 6 ಜನ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಕ್ಷಣಾ ಸ್ಥಳಗಳು ಧಾವಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.




