Devotional story:
ಲೋಕ ರಕ್ಷಣೆಗಾಗಿ ಮಹಾವಿಷ್ಣು ದಶಾವತಾರಗಳನ್ನು ತಾಳಿದ್ದಾನೆ, ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ದಶಾವತಾರಗಳಲ್ಲಿ ಮೂರನೇ ಅವತಾರವೇ ವರಾಹ ಅವತಾರ. ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಾಳಿದ್ದಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ.
ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಾಳಿದನು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ ,ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಹಂದಿಯ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ ಎನ್ನುವುದನ್ನು ನೋಡೋಣ ಬನ್ನಿ .
ಪುರಾಣಗಳ ಪ್ರಕಾರ ವೈಕುಂಠದ ದ್ವಾರಪಾಲಕರಾದ ಜಯ ವಿಜಯರೊಂದಿಗೆ ವರಾಹ ಅವತಾರದ ಕತೆ ಆರಂಭವಾಗುತ್ತದ್ದೆ. ಒಮ್ಮೆ ಮಹಾವಿಷ್ಣುವನ್ನು ಭೇಟಿ ಮಾಡಲು ನಾಲ್ವರು ಋಷಿ ಕುಮಾರರು ವೈಕುಂಠಕ್ಕೆ ಬರುತ್ತಾರೆ, ವೈಕುಂಠದ ಏಳನೇ ದ್ವಾರದಲ್ಲಿ ಋಷಿ ಕುಮಾರರನ್ನು ದ್ವಾರಪಾಲಕರಾದ ಜಯ ವಿಜಯರು ತಡೆಯುತ್ತಾರೆ. ಅವರ ಮಧ್ಯೆ ವಾಗ್ವಾದವೂ ನಡೆಯುತ್ತದೆ. ಅವರು ಬ್ರಹ್ಮನ ಮಾನಸ ಪುತ್ರರು ಎಂಬುದನ್ನೂ ತಿಳಿಯದೆ ದ್ವಾರ ಪಾಲಕರಾದ ಜಯ ವಿಜಯರು ಅವರೊಂದಿಗೆ ಜಗಳವಾಡುತ್ತಾರೆ ,ಕೋಪಗೊಂಡ ಋಷಿ ಕುಮಾರರು ನಿಮ್ಮಲ್ಲಿನ ದೈವತ್ವವು ಮಾಯವಾಗಲಿ, ನೀವು ಸಾಮಾನ್ಯರಂತೆ ಭೂಮಿಯ ಮೇಲೆ ಜನಿಸಿರೆಂದು ಶಾಪವನ್ನ ನೀಡುತ್ತಾರೆ.
ಕೊನೆಗೆ ದ್ವಾರ ಪಾಲಕರಾದ ಜಯ ವಿಜಯರಿಗೆ ತಮ್ಮ ತಪ್ಪಿನ ಅರಿವಾಗುತ್ತೆ. ಅಹಂಕಾರದಿಂದ ಋಷಿ ಕುಮಾರರ ಶಾಪಕ್ಕೆ ಗುರಿಯಾದ ಜಯ ವಿಜಯರಿಗೆ ಲಕ್ಷ್ಮೀ ನಾರಾಯಣರು ಒಂದು ಸಲಹೆ ನೀಡುತ್ತಾರೆ. ಹಾಗೆ ನೀಡುವ ಸಲಹೆಯೇ ಭೂ ಲೋಕದಲ್ಲಿ ನನ್ನ ಭಕ್ತರಾಗಿ ಏಳು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಅಥವಾ ಶತ್ರುಗಳಾಗಿ ಮೂರು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಎಂಬ ಸಲಹೆ ನೀಡುತ್ತಾರೆ .ಆಗ ದ್ವಾರಪಾಲಕರು ನಾವು ಹೆಚ್ಚು ಕಾಲ ನಿಮ್ಮಿಂದ ದೂರವಿರಲು ಸಾಧ್ಯವಿಲ್ಲ, ಶತ್ರುಗಳಾಗಿ ಮೂರು ಜನ್ಮವನ್ನ ಎತ್ತಿ ನಾವು ಶೀಘ್ರವಾಗಿ ನಿಮ್ಮಲ್ಲಿಗೆ ಸೇರುತ್ತೆೇವೆಂದು ಎಂದು ಹೇಳುತ್ತಾರೆ , ನಂತರ ಜಯ ವಿಜಯರು ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ ಭೂ ಲೋಕದಲ್ಲಿದ್ದ ಋಷಿ ಕಶ್ಯಪ ಮತ್ತು ದಿತಿ ದಂಪತಿಗಳ ಮಕ್ಕಳಾಗಿ ಜನಿಸುತ್ತಾರೆ.
ಇವರ ದುಷ್ಟತನದಿಂದ ಬ್ರಹ್ಮಾಂಡದಲ್ಲಿ ಅನಾಹುತವನ್ನು ಸೃಷ್ಟಿಸ್ತಾರೆ. ಅದ್ರಲ್ಲೂ ಹಿರಿಯ ಸಹೋದರ ಹಿರಣ್ಯಾಕ್ಷ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ವರಗಳ್ಳನ್ನು ಪಡೆಯುತ್ತಾನೆ. ತನಗೆ ಯಾವುದೇ ಪ್ರಾಣಿ ಅಥವಾ ಮನುಷ್ಯನಿಂದ ಸಾವು ಬಾರದಂತೆ ವರ ಪಡೆಯುತ್ತಾನೆ. ಬ್ರಹ್ಮನಿಂದ ವರ ಪಡೆದು ಅಹಂಕಾರದಿಂದ ಮೆರೆಯುತ್ತಿದ್ದ ಹಿರಣ್ಯಾಕ್ಷ ಭೂಮಿಯ ಮೇಲಿದ್ದ ಜನರನ್ನೂ, ದೇವತೆಗಳನ್ನೂ ಹಿಂಸಿಸ್ತಾನೆ. ಕಾರಣ ಹಿರಣ್ಯಾಕ್ಷನಿಗೆ ಇಡೀ ಭೂಮಿಯನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ ಇತ್ತು. ಭೂಮಿಯನ್ನು ಕದ್ದು ಮಹಾಸಾಗರಕ್ಕೆ ಎಸೆದಿದ್ದು. ಸಾಗರದಲ್ಲಿದ್ದ ಭೂದೇವಿಯನ್ನು ರಕ್ಷಿಸುವ ಸಲುವಾಗಿ, ಮಹಾವಿಷ್ಣು ವರಾಹ ಅವತಾರ ತಾಳುತ್ತಾನೆ.
ಬ್ರಹ್ಮನಿಂದ ವರವನ್ನು ಪಡೆಯುವಾಗ ಹಿರಣ್ಯಾಕ್ಷನು ತನ್ನ ನಾಶಕ್ಕೆ ಹೆಸರಿಸಿದ ಪ್ರಾಣಿಗಳ ಪಟ್ಟಿಯಲ್ಲಿ ಹಂದಿಯನ್ನು ಸೇರಿಸಿರೋದಿಲ್ಲ. ಈ ಕಾರಣದಿಂದಾಗಿ, ಮಹಾವಿಷ್ಣುವು ದೊಡ್ಡ ದಂತಗಳನ್ನು ಹೊಂದಿದ ವರಾಹ ರೂಪವನ್ನು ತಾಳಿ ಘರ್ಜಿಸುತ್ತಾ ಜಲ ಪ್ರವೇಶಿಸಿದ. ಸಾಗರದೊಳಗಿದ್ದ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ. ನಂತರ ಹಿರಣ್ಯಾಕ್ಷನನ್ನು ಸಂಹರಿಸಿದ.
ಮಹಾವಿಷ್ಣುವಿನ ವರಾಹ ಅವತಾರಕ್ಕೆ ಸಾಕ್ಷಿಯಾಗಿ ಆಂಧ್ರಪ್ರದೇಶದ ತಿರುಮಲದಲ್ಲಿ ಶ್ರೀ ವರಾಹಸ್ವಾಮಿ ದೇವಸ್ಥಾನವಿದೆ. ತಿಮ್ಮಪ್ಪನ ದೇವಸ್ಥಾನದ ಉತ್ತರಕ್ಕಿರುವ ಈ ದೇವಾಲಯವನ್ನು ಆದಿ-ವರಾಹ ಕ್ಷೇತ್ರ ಎಂದು ಕರೆಯಲಾಗುತ್ತೆ ,ಹೀಗಾಗೇ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೂ ಮುನ್ನ ಕ್ಷೇತ್ರಪಾಲಕನಾದ ವರಾಹ ಸ್ವಾಮಿಯ ದರ್ಶನ ಮಾಡಬೇಕೆಂಬ ನಿಯಮವಿದೆ. ವರಾಹಸ್ವಾಮಿಯ ದರ್ಶನ ಮಾಡದೆ ತಿರುಪತಿ ಯಾತ್ರೆ ಪೂರ್ಣವಾಗಲ್ಲ ಅನ್ನೋ ನಂಬಿಕೆ ಇದೆ.