Sunday, May 26, 2024

Latest Posts

ಶಾಸಕ ಎಮ್ ಪಿ ರೇಣುಕಾಚಾರ್ಯರ ಅಣ್ಣನ ಮಗ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ತುಂಗಾ ಕಾಲುವೆಯಲ್ಲಿ ಕಾರು ಪತ್ತೆ

- Advertisement -

ಸಿಎಂ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ದಿನಗಳ ನಂತರ ಕುರುಹು ಪತ್ತೆಯಾಗಿದ್ದು, ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಪತ್ತೆಯಾಗಿದೆ. ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ಕಾರು ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆ ಬಳಿ ಸಂಚರಿಸಿರುವ ಕುರುಹು ಪತ್ತೆಯಾಗಿದ್ದು ಕಾಲುವೆಯಲ್ಲಿ ಕಾರು ಬಿದ್ದಿದೆ ಎಂದು ಖಚಿತವಾಗಿದೆ. ಕ್ರೇನ್ ಬಳಸಿ ಕಾರು ಮೇಲೆತ್ತಿದ ಅಗ್ನಿಶಾಮಕ ದಳ. ತುಂಗಾ ಕಾಲುವೆ ಬಳಿ ರೇಣುಕಾಚಾರ್ಯ ಹಾಗೂ ಪೋಲಿಸರು ಸೇರಿದಂತೆ ನೂರಾರು ಜನ ಜಮಾಯಿಸಿದ್ದಾರೆ.

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಭಾನುವಾರ ರಾತ್ರಿ 11.30 ರಿಂದ ನಾಪತ್ತೆಯಾಗಿದ್ದು ಇದುವರೆಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅಲ್ಲದೆ ಶಿವಮೊಗ್ಗದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದದ್ದು ಸಿಸಿ ಕ್ಯಾಮರಾ ಫುಟೇಜ್ ಮಾತ್ರ ಸಿಕ್ಕಿದೆ.

ಶಾಸಕ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ಮಗನನ್ನು ನೆನೆದು ಗಳಗಳನೆ ಅಳುತ್ತಿದ್ದು ಮನಕಲಕುವಂತಿದೆ. ರೇಣುಕಾಚಾರ್ಯ ಆಪ್ತರು ಸಂಬಂಧಿಕರು ಹಾಗೂ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಹಲವರು ಧೈರ್ಯವನ್ನು ತುಂಬುತ್ತಿದ್ದಾರೆ.

- Advertisement -

Latest Posts

Don't Miss