Hubballi News : ವಿಪ ಸದಸ್ಯ ಪ್ರದೀಪ್ ಶೆಟ್ಟರ್ ಹಾಗೂ ನಾನು ಆತ್ಮೀಯರು, ಸಹೋದರರು ಇದ್ದ ಹಾಗೇ. ಈ ಸಂದರ್ಭದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು ಎಂದು ಶಾಸಕ ಮಹೇಶ ತೆಂಗಿನಕಾಯಿ ತಿಳಿಸಿದ್ದಾರೆ.
ನಗರದ ಟೌನ್ ಹಾಲ್ ನಲ್ಲಿ ತಮ್ಮ ಕ್ಷೇತ್ರದ ಜನರ ಅನುಕೂಲಕ್ಕಾಗಿ ನೂತನ ಜನಸಂಪರ್ಕ ಕಾರ್ಯಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಚೇರಿ ಉದ್ಘಾಟನೆಗೆ ಯಾವುದೇ ಆಮಂತ್ರಣ ಪತ್ರವನ್ನು ಮಾಡಿಸಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕೆ, ಖುಷಿಗಾಗಿ ಪ್ರದೀಪ್ ಶೆಟ್ಟರ್ ಫೋಟೋ ಕೈಬಿಟ್ಟು ಆಮಂತ್ರಣ ಪತ್ರವನ್ನು ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರದೀಪ್ ಶೆಟ್ಟರ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತನಾಡಿದ್ದೇನೆ. ಅವರು ಸಮತಿ ಸಭೆಯ ನಿಟ್ಟಿನಲ್ಲಿ ಪ್ರವಾಸದಲ್ಲಿದ್ದಾರೆ. ಹೀಗಾಗಿ ನಾನು ಬರುವುದಿಲ್ಲ ಎಂದಿದ್ದಾರೆ. ನಾವು ನನ್ನ ಅಧಿಕೃತ ಫೇಜ್’ನಲ್ಲಿ ಸ್ಪಷ್ಟನೆ ನೀಡಿದ್ದೇನೆ ಎಂದರು.
ಪ್ರದೀಪ್ ಶೆಟ್ಟರ್ ಅವರನ್ನು ಕಡೆಗಣಿಸುವ ಪ್ರಶ್ನೇಯೇ ಇಲ್ಲ. ನಮ್ಮ ಅವರ ಮಧ್ಯೆ ಯಾವುದೇ ಮನಸ್ಥಾಪವಿಲ್ಲ. ಅವರು ಎಲ್ಲಿಯೂ ತಾಪ ಆಗಿದೆ ಎಂದು ಹೇಳಿಲ್ಲ. ಜಿಲ್ಲೆಯಲ್ಲಿ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯನ್ನು ಕರೆದಿದ್ದೇವೆ ಎಂದ ಅವರು, ಈ ಸಭೆಯಲ್ಲಿ ವಿಪ ಸದಸ್ಯ ಪ್ರದೀಪ್ ಶೆಟ್ಟರ್ ಅವರು ಜಿಲ್ಲೆಯ ಹೊರಗಡೆ ಇರುವ ಕಾರಣ ಭಾಗವಹಿಸೋದಿಲ್ಲ. ಇದನ್ನು ಸುದ್ದಿಯಾಗಿ ಮಾಡಬಾರದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಸಮಾನ ಮನಸ್ಕರು ಇದ್ದೇವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡತ್ತೇವೆ ಎಂದರು.
ಖಾಸಗಿ ವಾಹನ ಸವಾರರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಹಲವಾರು ಸೈಡ್ ಎಫೆಕ್ಟ್ ಆಗಿವೆ. ಮೊದಲು ಕಾಂಗ್ರೆಸ್’ನವರು ಯಾವುದೇ ಕಂಡಿಷನ್ ಹಾಕದೇ ಗ್ಯಾರಂಟಿ ಘೋಷಣೆ ಮಾಡಿ, ಇದೀಗ ಕಂಡಿಷನ್ ಹಾಕತ್ತಾ ಇದ್ದಾರೆ. ಮುಖ್ಯಮಂತ್ರಿಗಳಿಗೆ ಗ್ಯಾರಂಟಿಗಳಿಗೆ ಹಣ ಹೊಂದಿರುವುದು ಸವಾಲಿನ ಕೆಲಸ ಆಗಿದೆ ಎಂದರು.
ಕಾಂಗ್ರೆಸ್ ‘ನವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿಯಲ್ಲಿ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಸ್ಸುಗಳಿಗೆ ಡಿಸೇಲ್ ಹಾಕಿಸೋದಕ್ಕೂ ಕಷ್ಟ ಆಗುತ್ತದೆ. ಮುಂದೆ ಸರ್ಕಾರದ ಮುಂದೆ ಸಮಸ್ಯೆಗಳ ಸರಮಾಲೆ ಬರಲಿದೆ. ನಾವು ವಿರೋಧ ಪಕ್ಷವಾಗಿ ರಚನಾತ್ಮಕ ಹೋರಾಟ ಮಾಡುತ್ತೇವೆ ಎಂದು ಶಾಸಕ ಮಹೇಶ ತೆಂಗಿನಕಾಯಿ ತಿಳಿಸಿದರು.
Pralhad Joshi : ಬಿಜೆಪಿ – ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Pralhad Joshi : ರಾಜ್ಯ ಸರ್ಕಾರ ಖಾಸಗಿ ಬಸ್ ಮಾಲೀಕರ ತೊಂದರೆ ನಿವಾರಿಸಬೇಕು : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Pigeon: ಫ್ಲಾಟ್ ನಲ್ಲಿ ಪಾರಿವಾಳಗಳ ರುಂಢ ಕಟ್..?! ಅಲ್ಲಿ ಆಗಿದ್ದೇನು..?!