Friday, November 22, 2024

Latest Posts

ಮಖಾನ ಬೀಜದ್ಲಲಿ ಅಡಗಿರುವ ಆರೋಗ್ಯ ರಹಸ್ಯಗಳು ಇಷ್ಟೊಂದಾ..?!

- Advertisement -

Health tips:

ಮಖಾನ ಸೀಡ್ಸ್ ಇದು ಹಲವರಿಗೆ ಅಪರಿಚಿತವೆಂದು ಹೇಳಬಹುದು ಇದನ್ನು ಲೋಟಸ್ ಸೀಡ್ಸ್ ಎಂದು ಸಹ ಕರೆಯುತ್ತಾರೆ .ಮಖಾನ ಬೀಜಗಳಲ್ಲಿ ಕಂಡುಬರುವ ಗುಣಲಕ್ಷಣಗಳು ಇತರ ಯಾವುದೇ ಬೀಜಗಳಿಂಗಿಂತ ಭಿನ್ನವಾಗಿರುತ್ತದೆ .ಇದು ಮನುಷ್ಯರ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಾಗು ಚೀನಾ ದೇಶದಲ್ಲಿ ಬೀಜಗಳನ್ನು ಔಷಧಿ ತಯಾರಿಸಲು ಉಪಯೋಗ ಮಾಡುತ್ತಾರೆ. ಮೂತ್ರ ಪಿಂಡಗಳು ಮತ್ತು ಗುಲ್ಮ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಸೇವಿಸಬಹುದು. ಇನ್ನು ಡ್ರೈ ಫ್ರೂಟ್ ಗಳಾದ ಬಾದಾಮಿ ಬೀಜಗಳು, ವಾಲ್ನಟ್, ಗೋಡಂಬಿ ಬೀಜಗಳಿಗೆ ಹೋಲಿಸಿದರೆ, ಪೌಷ್ಟಿಕ ಸತ್ವಗಳಲ್ಲಿ ಹೆಚ್ಚಾಗಿರುತ್ತದೆ .

ಮಖಾನಾದಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಇದರ ಸೇವನೆಯಿಂದ ಜೇರ್ಣಕ್ರಿಯೆ ಉತ್ತಮವಾಗಿರುತ್ತದೆ ಹಾಗು ಬೀಜವನ್ನು ಪ್ರತಿಯೊಂದು ವಯಾಸ್ಸಿನವರು ಸುಲಭವಾಗಿ ಜೀರ್ಣಿಸಿಕೊಳ್ಳಬ್ನಹುದು.ಇದರಲ್ಲಿ ಕೊಲೆಸ್ಟ್ರಾಲ್, ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಕಡಿಮೆ ಇರುವುದರಿಂದ ಮಖಾನಾ ಹೃದಯಕ್ಕೆ ಉತ್ತಮ ಆಹಾರವಾಗಿದೆ. ಬೀಜಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್, ಪ್ರೋಟೀನ್ ಮತ್ತು ರಂಜಕದ ಅತ್ಯುತ್ತಮ ಮೂಲವಾಗಿದೆ. ಹೆಚ್ಚಿನ ಪೌಷ್ಠಿಕಾಂಶವು ಮಖಾನಾಗಳನ್ನು ಅತ್ಯಂತ ಆರೋಗ್ಯಕರ ಎಂದು ಪರಿಗಣಿಸಲಾಗಿದೆ.
ಮಖಾನಗಳಲ್ಲಿ ಕ್ಯಾಲೊರಿ ಕೂಡ ಕಡಿಮೆ – 100 ಗ್ರಾಂ ಬೀಜಗಳಲ್ಲಿ 347 ಕ್ಯಾಲೊರಿಗಳಿವೆ. ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸೂಕ್ತವಾಗಿದೆ. ಮಖಾನ ಬೀಜದ ಇತರ ನಂಬಲಾಗದ ಆರೋಗ್ಯ ಪ್ರಯೋಜನಗಳನ್ನು ತಿಳಿದು ಕೊಳ್ಳೋಣ ಬನ್ನಿ.

. ಬೆಳಗಿನ ಸಮಯದಲ್ಲಿ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸಿದರೆ ಇಡೀ ದಿನ ಹಸಿವಿಲ್ಲದೆ ಸುಲಭವಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ,ಒಂದು ಬಟ್ಟಲು ಮಖಾನ ಬೀಜಗಳನ್ನು ಸೇವಿಸಿದರೂ ಸಹ ನಿಮ್ಮ ಕ್ಯಾಲರಿಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

. ಪ್ರತಿ ದಿನ ಮಖಾನ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ಚರ್ಮದ ಹೊಳಪು ಹೆಚ್ಚುತ್ತದೆ, ಆದರೆ ಯಾವುದೇ ಕಾರಣಕ್ಕೂ ಮಖಾನ ಬೀಜಗಳನ್ನು ಎಣ್ಣೆಯಲ್ಲಿ ಕರಿದು ತಿನ್ನಬಾರದು.

.ಮಖಾನ ಬೀಜಗಳು ಮಧುಮೇಹಿ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಒಂದು ಉತ್ತಮವಾದ ಆಹಾರ ಎನ್ನಲಾಗಿದೆ . ಇವುಗಳಲ್ಲಿ ಹೆಚ್ಚಿನ ಪೊಟ್ಯಾಶಿಯಂ ಅಂಶ ಮತ್ತು ಕಡಿಮೆ ಸೋಡಿಯಂ ಅಂಶ ಇರುವುದರಿಂದ ರಕ್ತದ ಒತ್ತಡದಲ್ಲಿ ಯಾವುದೇ ಬಗೆಯ ಹೆಚ್ಚು ಕಡಿಮೆ ಆಗದೇ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ರಕ್ತದ ಒತ್ತಡದ ಸಮಸ್ಯೆಯಿಂ ಬಳಲುತ್ತಿರುವವರು ಮಖಾನ ಬೀಜಗಳನ್ನು ಸೇವಿಸುವುದು ಉತ್ತಮ .

. ಮನುಷ್ಯನ ಬಿಳಿ ರಕ್ತ ಕಣಗಳನ್ನು ಮತ್ತು ಪ್ಲೇಟ್ಲೆಟ್ ಗಳನ್ನು ಶೇಖರಿಸಿಡುವ ಗುಲ್ಮ ರೋಗ ನಿರೋಧಕ ವ್ಯವಸ್ಥೆಯ ಕೇಂದ್ರಬಿಂದುವಾಗಿದೆ. ಮಖಾನ ಬೀಜಗಳು ಕೆಂಪು ರಕ್ತ ಕಣಗಳನ್ನು ಪುನಶ್ಚೇತನಗೊಳಿಸುತ್ತವೆ. ಇದರಿಂದ ಮನುಷ್ಯನ ದೇಹದಲ್ಲಿ ರಕ್ತ ಸಂಚಾರದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

. ಮಖಾನ ಬೀಜಗಳು ಆಂಟಿಬ್ಯಾಕ್ಟರಿಯಲ್ ಗುಣ ಲಕ್ಷಣಗಳನ್ನು ಸಹ ಹೊಂದಿವೆ. ಇದರಿಂದ ಹಲವಾರು ಬ್ಯಾಕ್ಟೀರಿಯಾ ಸಂಬಂಧಿತ ಸಮಸ್ಯೆಗಳು ದೂರಾಗುತ್ತವೆ.

ಡಾರ್ಕ್ ಚಾಕೊಲೇಟ್ ಸೇವನೆ ಆರೋಗ್ಯಕ್ಕೆ ಉತ್ತಮ..?!

ಕಾಫಿ ಪ್ರಿಯರಿಗೆ ಗುಡ್ ನ್ಯೂಸ್…! ಕಾಫಿ ಕುಡಿದರೆ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ…?

ಅಗಸೆ ಬೀಜಗಳ ಬಗ್ಗೆ ತಿಳಿದರೆ ಇಂದಿನಿಂದ ನೀವು ತಿನ್ನಲು ಆರಂಭಿಸುತ್ತೀರಿ..!

 

- Advertisement -

Latest Posts

Don't Miss