Thursday, April 18, 2024

Latest Posts

ಬಾಲಿವುಡ್‌ನ ಸ್ಟಾರ್ ಹೀರೋಗೆ ‘ಮಕ್ಕಳ್ ಸೆಲ್ವನ್’ ವಿಲನ್..!

- Advertisement -

 

ದಕ್ಷಿಣ ಭಾರತದ ಬ್ಯುಸಿ ನಟರಲ್ಲಿ ವಿಜಯ್ ಸೇತುಪತಿ ಕೂಡ ಒಬ್ಬರು. ಅಷ್ಟೇ ಅಲ್ಲದೆ ಬಹುಭಾಷೆಯ ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಹೀರೋ ಆಗಿ ನಟಿಸಿದ್ದ ‘ಕಾಥುವಾಕುಲು ರೆಂಡು ಕಾಧಲ್’ ಸಿನಿಮಾ ಯಶಸ್ಸು ಕಂಡಿದೆ. ಹಾಗೂ ವಿಲನ್ ಆಗಿ ನಟಿಸಿರುವ ‘ವಿಕ್ರಮ್’ ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ.

‘ಮುಂಬೈಕರ್’ ಮತ್ತು ‘ಮೇರಿ ಕ್ರಿಸ್ ಮಸ್’ ಸಿನಿಮಾ ಮೂಲಕ ಈಗಾಗಲೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ‘ಬಾಲಿವುಡ್ ಬಾದ್ ಷಾ’ ಶಾರುಖ್ ಖಾನ್ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬರ್ತಿದೆ.

ಶಾರುಖ್ ಖಾನ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವಂತೆ ವಿಜಯ್ ಸೇತುಪತಿ ಅವರಿಗೆ ‘ಜವಾನ್’ ತಂಡ ಅಪ್ರೋಚ್ ಮಾಡಿರುವುದು ನಿಜ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.

ಸದ್ಯ ಜೂಲೈ 15 ರವರೆಗೂ ಮುಂಬೈನಲ್ಲಿ ನಡೆಯಲಿರುವ ಶೂಟಿಂಗ್ ನಲ್ಲಿ ನಯನತಾರಾ ಭಾಗಿಯಾಗಿದ್ದಾರೆ. ಇನ್ನು ಈ ಸಿನಿಮಾ ಜೂನ್ 2 ರಂದು ತೆರೆಯ ಮೇಲೆ ಬರಲಿದೆ. ಸಾನ್ಯಾ ಮಲ್ಹೋತ್ರ, ಸುನೀಲ್ ಗ್ರೋವರ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜಿ.ಕೆ.ವಿಷ್ಣು ಅವರು ಛಾಯಾಗ್ರಹಣ ಮಾಡುತ್ತಿದ್ದು, ತಮಿಳಿನ ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಬ್ಯಾನರ್ ಜವಾನ್ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇದ್ದು, ಇತ್ತೀಚಿಗಷ್ಟೇ ಜವಾನ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

- Advertisement -

Latest Posts

Don't Miss