ಅವಾಂತರ ಸೃಷ್ಟಿಸಿದ ಮಲಪ್ರಭಾ-ಘಟಪ್ರಭಾ ನದಿ: ಆತಂಕದಲ್ಲಿ ಬೆಳಗಾವಿ ಜನ

Belagavi News: ಬೆಳಗಾವಿ: ಬೆಳಗಾವಿಯ ಪಶ್ಚಿಮ ಘಟ್ಟದಲ್ಲಿ ಮಲಪ್ರಭಾ ನದಿ ಮಳೆಯಿಂದ ಮೈದುಂಬಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಗಂಗಾಬಿಕೆ ದೇವಸ್ಥಾನ ಅರ್ಧಕ್ಕಿಂತ ಹೆಚ್ಚು ಮುಳುಗಡೆಗೊಂಡಿದೆ.

ಅಲ್ಲದೇ, ಮಲಪ್ರಭಾ ನದಿಯ ಮೇಲಿನ ಕೆಳ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಜಲಾವೃತ ಹಿನ್ನಲೆ ಸಾರ್ವಜನಿಕರ ಸಂಚಾರಕ್ಕೆ ನಿರ್ಭಂದ ಹೇರಲಾಗಿದೆ. ಮಲಪ್ರಭಾ ನದಿ ಉಕ್ಕಿ ಹರಿದು ಜಮೀನುಗಳಿಗೆ ಸೇರಿ, ಬೆಳೆ ಹಾನಿಯಾಗಿದೆ.

ಇದು ಮಲಪ್ರಭೆಯ ಕಥೆಯಾದರೆ, ಇತ್ತ ಘಟಪ್ರಭಾ ಸುಣಧೋಳಿ ಗ್ರಾಮಕ್ಕೆ ನುಗ್ಗಿ, ಜಡೆಸಿದ್ದೇಶ್ವರ ದೇವಸ್ಥಾನವನ್ನು ಜಲಾವೃತ ಮಾಡಿದ್ದಾಳೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ದೇವಸ್ಥಾನದ ಮಳಿಗೆಗಳಿಗೂ ನದಿಯ ನೀರು ನುಗ್ಗಿ, ಅವಾಂತರ ಸೃಷ್ಟಿಸಿದೆ. ಗ್ರಾಮಸ್ಥರು ಎಲ್ಲಿ ತಮ್ಮ ಮನೆಗಳಿಗೆ ನೀರು ನುಗ್ಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.

About The Author