Sunday, September 8, 2024

Latest Posts

Malayalam ಸೂಪರ್ ಹಿಟ್ ಚಲನಚಿತ್ರ “ಫೋರೆನ್ಸಿಕ್” ಈಗ ಕನ್ನಡಕ್ಕೆ..!

- Advertisement -

ಮಲೆಯಾಳಂ (malayalam) ನಲ್ಲಿ ಕಂಟೆಂಟ್ ಓರಿಯಂಟೆಡ್ (Content Oriented) ಚಿತ್ರಗಳು ಹೆಚ್ಚು ಬರುತ್ತದೆ ಎಂಬ ಮಾತು ಎಲ್ಲೆಡೆ ಇದೆ. ಆ ಪೈಕಿ ವಿಭಿನ್ನ ಕಥಾಹಂದರ ಹೊಂದಿರುವ “ಫೋರೆನ್ಸಿಕ್” (Forensic) ಚಿತ್ರವೂ ಒಂದು. ಈ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರ ನೋಡಿ ಪ್ರಭಾವಿತರಾದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು (Chandrasekhar Naidu) “ಅಂತಿಮ‌ ಕ್ಷಣ” ಎಂಬ ಹೆಸರಿನಿಂದ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಡಬ್ಬಿಂಗ್ ಕಾರ್ಯ (dubbing function) ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ‌ತಿಳಿಯಲಿದೆ. ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಟೊವಿನೊ‌ ಥಾಮಸ್, ರೆಬಾ ಮೋನಿಕಾ, ಮಮತ ಮೋಹನದಾಸ್,‌ ಪ್ರತಾಪ್ ಪೋಪನ್ , ಜಿಜುಜಾನ್ ಮುಂತಾದವರಿದ್ದಾರೆ. ಜೆಕ್ಸ್ ಬಿಜೋಯ್ ಸಂಗೀತ ನಿರ್ದೇಶನ, ಅಖಿಲ್ ಜಾರ್ಜ್ ಛಾಯಾಗ್ರಹಣ, ಶಮೀರ್ ಅಹಮದ್ ಸಂಕಲನ ಈ ಚಿತ್ರಕ್ಕಿದೆ. ಬಿ ಮಂಜುನಾಥ್ ಹಾಗೂ ರಜನೀಶ್ ದೇವ ಸಂಭಾಷಣೆ ಬರೆದಿದ್ದಾರೆ.

- Advertisement -

Latest Posts

Don't Miss