- Advertisement -
National News : ದೇಶದೆಲ್ಲೆಡೆ 77ರ ಸ್ವಾತಂತ್ರ್ಯ ಸಂಭ್ರಮ ಈ ವೇಳೆ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದರು. ಈ ವೇಳೆ ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಸಿಗೋಣ ಎಂದು ಹೇಳಿದರು. ಈ ಮಾತಿಗೆ ಮಲ್ಲಿಖಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ವರ್ಷ ಇದೇ ಕೆಂಪು ಕೋಟೆಯಿಂದ ಆಗಸ್ಟ್ 15 ರಂದು, ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡುತ್ತೇನೆ. ಹೆಚ್ಚಿನ ಆತ್ಮವಿಶ್ವಾಸದಿಂದ ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿಗೆ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿಯವರ ಹೇಳಿಕೆಗಳು ಅವರ ದುರಹಂಕಾರವನ್ನು ತೋರಿಸುತ್ತದೆ. ಮುಂದಿನ ವರ್ಷವೂ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡುತ್ತಾರೆ. ಆದರೆ ಅವರು ಅವರ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ಖರ್ಗೆ ಹೇಳಿದರು.
- Advertisement -