Tuesday, December 17, 2024

Latest Posts

ELECTION :EVM ಪರ ನಿಂತ ಮಮತಾ ಬ್ಯಾನರ್ಜಿ ಪಕ್ಷ

- Advertisement -

ಇವಿಎಂ ವಿರುದ್ದ ಕಾಂಗ್ರೆಸ್ ಆರೋಪವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ತಳ್ಳಿ ಹಾಕಿದ ಬೆನ್ನಲ್ಲೇ ಇದೀಗ ಮಗದೊಂದು ಮಿತ್ರ ಪಕ್ಷವು ಇವಿಎಂ ಪರ ನಿಂತಿದೆ.

 

ಹೌದು ಇವಿಎಂ ಕುರಿತು ಒಮರ್ ಅಬ್ದುಲ್ಲಾ ಹೇಳಿಕೆ ಬೆನ್ನಲ್ಲೇ ಐಎನ್ ಡಿಐ ಒಕ್ಕೂಟದ ಪಕ್ಷವಾದ ಟಿಸಿಎಂ ಕೂಡ ಇವಿಎಂ ಪರವಾಗಿ ಹೇಳಿಕೆ ನೀಡಿದೆ. ಟಿಎಂಸಿ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಇವಿಎಂಗಳನ್ನು ಅನುಮಾನಿಸುವವರುವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮತ್ತು ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು ಅಂದಿದ್ದಾರೆ.

 

ಇವಿಎಂ ಬಗ್ಗೆ ಪ್ರಶ್ನೆ ಎತ್ತುವವರು ತಮ್ಮ ಬಳಿ ಏನಾದರೂ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ಡೆಮೊ ತೋರಿಸಬೇಕು. ಇವಿಎಂ ರ್ಯಾಂಡಮೈಸೇಶನ್ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಿದರೆ ಮತ್ತು ಅಣಕು ಮತದಾನ ಮತ್ತು ಮತ ಎಣಿಕೆ ಸಮಯದಲ್ಲಿ ಜನರು ಸರಿಯಾಗಿ ಕೆಲಸ ಮಾಡಿದೆ. ಹಾಗಾಗಿ ಈ ಆರೋಪದಲ್ಲಿ ಯಾವುದೇ ಹುರುಳಿದೆ ಅಂತ ನನಗನಿಸುವುದಿಲ್ಲ ಅಂದಿದ್ದಾರೆ.

“ಇವಿಎಂಗಳನ್ನು ಹ್ಯಾಕ್ ಮಾಡಬಹುದು ಅಂತ ಯಾರಾದರೂ ಭಾವಿಸಿದರೆ, ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮತ್ತು ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು… ಕೇವಲ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ…” ಅಂತ ಟಿಸಿಎಂ​ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಂತರದ ಸ್ಥಾನದಲ್ಲಿರುವ ನಾಯಕ ಹೇಳಿದ್ದಾರೆ.

 

ತಡವಾಗಿಯಾದರೂ ತೃಣಮೂಲ ನಾಯಕರಿಗೆ ಸತ್ಯ ಅರ್ಥವಾಗಿದೆ ಎಂದು ಕೇಂದ್ರ ಸಚಿವ ಸತೀಶ್ ಚಂದ್ರ ದುಬೆ ಹೇಳಿದ್ದಾರೆ. “ಇತ್ತೀಚೆಗೆ ಎರಡು ಚುನಾವಣೆಗಳು ನಡೆದಿವೆ, ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್‌ನಲ್ಲಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಗೆದ್ದ ಪಕ್ಷವು ಭಾರತದ ಮೈತ್ರಿಕೂಟದ ಭಾಗವಾಗಿದೆ ಮತ್ತು ಆಗ ಇವಿಎಂಗಳ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಜಾರ್ಖಂಡ್‌ನಲ್ಲಿ, ಭಾರತ ಮೈತ್ರಿಕೂಟವು ಗೆದ್ದಿದೆ ಅಲ್ಲೂ ಯಾವುದೇ ತಕರಾರು ಇಲ್ಲ. ಒಂದು ಸುಳ್ಳಿನ ಆಧಾರದ ಮೇಲೆ ಮೈತ್ರಿಯನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಅಭಿಷೇಕ್ ಬ್ಯಾನರ್ಜಿ ತಡವಾಗಿಯಾದರೂ ಅರಿತುಕೊಂಡಿದ್ದಾರೆ ಅಂತ ದುಬೆ ಹೇಳಿದ್ದಾರೆ.

- Advertisement -

Latest Posts

Don't Miss