ರಾಯಚೂರು: ಬಿಸಿಲನಾಡು ನಾಡು ಎಂದು ಹೆಸರು ಪಡೆದ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಎಗ್ಗಿಲದೆ ನಡೆಯುತ್ತಿದೆ. ಆದ್ರೆ ಇದು ಅಧಿಕಾರಿಗಳ ಗಮನಕ್ಕೆ ಇದ್ದರೂ ಮೌನಕ್ಕೆ ಶರಣಾಗಿದ್ದಾರೆ. ಆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಇಂದು ಓರ್ವ ಯುವಕನನ್ನು ಬಲಿ ಪಡೆದಿದೆ. ಎಲ್ಲಿ ಅಂತ ಮುಂದೆ ಸುದ್ದಿ ಓದಿ..
ಹೆಣದ ಮುಂದೆ ಆಳುತ್ತ ಕುಳಿತ ಕುಟುಂಬಸ್ಥರು, ಒಂದು ಕಡೆ ಮೌನವಾಗಿ ನಿಂತ ಅಣ್ಣ ತಮ್ಮಂದಿರು, ಮನೆ ಮುಂದೆ ಮಲಗಿರುವ ಯುವಕನ ಮೇಲೆ ಹರಿದ ಲಾರಿ ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯಲ್ಲಿ.
ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಘಟನೆ ನಡೆದಿದೆ. ಕುಷ್ಟಗಿ ತಾಲ್ಲೂಕಿನ ಮೂಲದ ಮಾರುತಿ ಎಂಬ ಯುವಕನ ಕುಟುಂಬಸ್ಥರು ದೇವದುರ್ಗ ತಾಲ್ಲೂಕಿನ ಲಿಂಗದಹಳ್ಳಿಯ ಗ್ರಾಮದ ಕೃಷ್ಣ ನದಿ ತೀರದ ಈ ಕುಟುಂಬವು ಲಿಜಿಗೆ ಹೊಲ ಮಾಡಲು ಕಳೆದ ಐದು ವರ್ಷಗಳಯಿಂದ ಬಂದಿದ್ದರು. ಹೊಲದಲ್ಲಿ ಒಂದು ಚಿಕ್ಕ ಗುಡಿಸಲು ಹಾಕಿ ಕೊಂಡು ಜೀವನ ನಡೆಸುತ್ತಿದ್ರು. ಆದರೆ ಆ ಹೊಲದ ಮುಂದೆ ಅಕ್ರಮ ಮರಳು ಸಂಗ್ರಹ ಮಾಡುತ್ತಿದ್ದರು. ಆದರೆ ದುರದೃಷ್ಟ ಬೇಸಿಗೆ ಎಂದು ಹೊರಗೆ ಮಲಗಿರುವ ಮಾರುತಿ ಎಂಬ 19 ವರ್ಷದ ಓರ್ವ ಯುವಕನ ಮೇಲೆ ಮರಳು ಲಾರಿ ಹರಿದಿದ್ದು ಸ್ಥಳದಲ್ಲಿ ಯುವಕ ಮಾರುತಿ ಮೃತ ಪಟ್ಟಿದ್ದಾನೆ.
ಇನ್ನೂ ಒಂದು ಕಡೆ ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಎಗ್ಗಿಲದೆ ನಡೆಯುತ್ತಿದೆ. ಇಂತಹ ಘಟನೆಗಳು ಮಾತ್ರ ಪದೇಪದೇ ಮರು ಕಳಿಸಿದರು ಅಧಿಕಾರಿಗಳು ಮಾತ್ರ ಎಚ್ಚೆತ್ತು ಕೊಂಡಿಲ್ಲ. ಇನ್ನೂ ರಾಶಿ ರಾಶಿ ಮರಳು ಹೊಲಗಳಲ್ಲಿ ಸಂಗ್ರಹಣೆ ಮಾಡ್ತಿದ್ದಾರೆ. ಅದೇ ರೀತಿ ಮಾರುತಿ ಎಂಬ ಯುವಕನ ಹೊಲದ ಮುಂದೆ ಆಕ್ರಮ ಮರಳು ಸಂಗ್ರಹ ಮಾಡುತ್ತಿದ್ದರು. ಆದರೆ ಬೇಸಿಗೆ ಇರುವುದರಿಂದ ಮಾರುತಿ ಎಂಬ ಯುವಕ ಮನೆಯ ಮುಂದೆ ಮಲಗಿದ್ದ.
ರಾತ್ರಿ ಚಾಲಕ ಟಿಪ್ಪರ್ ನಲ್ಲಿ ಮರಳು ತುಂಬಿಕೊಳ್ಳಲು ಬಂದಿದ್ದ.. ಆಗ ಮಲಗಿದ್ದ ಮಾರುತಿ ಮೇಲೆ ಲಾರಿಹರಿದಿದೆ.. ಇನ್ನೂ ಆ ಅಕ್ರಮ ಮರಳು ಸಂಗ್ರಹ ಮಂಜುನಾಥ ಹಾಗೂ ಹನುಮಂತ ಎಂಬುವವರಿಗೆ ಸೇರಿದ್ದು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇನ್ನೂ ಆಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಿ ಅಕ್ಕ ಪಕ್ಕದವರನ್ನು ನೆಮ್ಮದಿಯಿಂ ಇರಲು ಬಿಡಿ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.
ವರದಿ: ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು




