Thursday, November 21, 2024

Latest Posts

ಬಿಗ್‌ಬಾಸ್ ಮನೆಯಿಂದ ಮಾನಸಾ ಔಟ್: ಮೌನವಾಗಿ ಕಳುಹಿಸಿಕೊಟ್ಟ ಸ್ಪರ್ಧಿಗಳು

- Advertisement -

Bigg boss: ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ತುಕಾಲಿ ಸಂತೋಷ್ ಪತ್ನಿ ಮಾನಸಾ ಎಲಿಮಿನೇಟ್ ಆಗಿದ್ದಾರೆ. ನಿನ್ನೆ ಅನುಷಾ ಮತ್ತು ಮಾನಸಾ ಇಬ್ಬರೂ ಡೇಂಜರ್‌ ಜೋನ್‌ನಲ್ಲಿ ಇದ್ದು, ಕೊನೆಗೆ ಮಾನಸಾ ಮನೆಯಿಂದ ಹೊರಬಿದ್ದಿದ್ದಾರೆ.

ಮನೆಯಿಂದ ಸ್ಪರ್ಧಿಗಳು ಹೊರಗೆ ಹೋಗುವಾಗ ಮನೆಮಂದಿ ಎಲ್ಲ ಅಪ್ಪಿ, ಬೀಳ್ಕೊಡುತ್ತಾರೆ. ಆದರೆ ಮಾನಸಾ ಹೊರಹೋಗುವಾಗ ಯಾರೂ ಮಾತನಾಡುವಂತಿಲ್ಲ. ಮೌನವಾಗಿರಬೇಕು ಎಂದು ಸುದೀಪ್ ಆದೇಶ ನೀಡಿದ್ದರು. ಹಾಗಾಗಿ ಮಾನಸಾ ಹೋರಹೋಗುವಾಗ, ಯಾರೂ ಕೂಡ ಆಕೆಗೆ ವಿದಾಯ ಹೇಳಲಿಲ್ಲ.

ಇನ್ನು ಮಾನಸಾ ಸ್ಟೇಜ್ ಮೇಲೆ ಬಂದಾಗ, ಅವರನ್ನು ಸ್ವಾಗತಿಸಲು ಅವರ ಪತಿ ತುಕಾಲಿ ಸಂತು ಕೂಡ ಬಂದಿದ್ದರು. ಈ ವೇಳೆ ಮಾತನಾಡಿದ ಮಾನಸಾ, ನನಗೆ ಇದೆಲ್ಲ ಹೊಸ ಅನುಭವ. ಹೇಗಿರಬೇಕು ಎಂದು ಗೊತ್ತಿರಲಿಲ್ಲ. ನನ್ನ ಮೇಲೆ ನಿರೀಕ್ಷೆ ಇಟ್ಟು ಕರೆಸಿದ್ದರು. ಆದರೆ ಆ ನೀರಿಕ್ಷೆಯನ್ನು ನಾನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಮಾನಸಾ ಬೇಸರ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ತುಕಾಲಿ ಸಂತು, ಆಕೆ ಎಲಿಮಿನೇಟ್ ಆಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಹಳ್ಳಿಯಲ್ಲಿ ಹುಟ್ಟಿ, ಕಡುಬಡತನದಲ್ಲಿ ಬೆಳೆದು, ಬಿಗ್‌ಬಾಸ್ ಮನೆಗೆ ಬಂದಿದ್ದಾಳೆ, ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಳೆ ಎಂದರೆ, ಅದು ದೊಡ್ಡ ಸಂಗತಿ. ಆಕೆಗೆ ಹೇಗಿರಬೇಕು ಎಂಬುದು ಅರ್ಥವಾಗಿಲ್ಲ. ಆಕೆಯ ಮಾತಿನಿಂದ ಬೇಸರವಾಗಿದ್ದರೆ, ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಸಂತು ಹೇಳಿದರು.

ಇನ್ನು ಮಾನಸಾ ಹೊರಗೆ ಹೋಗುವಾಗ ಬಿಗ್‌ಬಾಸ್ ಅವರಿಗೆ ವಿಶೇಷ ಅಧಿಕಾರ ಕೊಟ್ಟಿದ್ದು, ಈ ವಾರ ನಿಮ್ಮ ಆಯ್ಕೆಯ ವ್ಯಕ್ತಿಯನ್ನು ನೀವು ಜೈಲಿಗೆ ಕಳಿಸಬಹುದು ಎಂದಿದ್ದರು. ಹಾಗಾಗಿ ಮಾನಸಾ ಉಗ್ರಂ ಮಂಜು ಅವರನ್ನು ಜೈಲಿಗೆ ಕಳಿಸಲು ಆಯ್ಕೆ ಮಾಡಿದರು.

ಮಾನಸಾ ತನ್ನ ಮಾತಿನಿಂದ ನಗಿಸುತ್ತಿದ್ದರೂ ಕೂಡ, ಜಗಳವಾಡುವ ಸಂದರ್ಭದಲ್ಲಿ ಕಿರಿಕಿರಿಯಾಗುವಂತೆ ನಡೆದುಕೊಳ್ಳುತ್ತಿದ್ದರು. ಇದರಿಂದ ಟ್ರೋಲ್ ಆಗಿ, ಆಕೆಯನ್ನು ಬೇಗ ಮನೆಗೆ ಕಳುಹಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇನ್ನು ಪ್ರೇಕ್ಷಕರು ಮಾನಸಾಗೆ ಹೆಚ್ಚಿನ ಸಂಖ್ಯೆಯಲ್ಲಿ ಓಟ್ ಮಾಡದ ಕಾರಣ, ಮಾನಸಾ 5ನೇ ವಾರಕ್ಕೆ ಹೊರಬಂದಿದ್ದಾರೆ.

- Advertisement -

Latest Posts

Don't Miss