Mandya: ವಸತಿ ಶಾಲೆ ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿ ಮಾರಾಟಕ್ಕೆ ಯತ್ನ ಆರೋಪ..

Mandya: ಮಂಡ್ಯದ ಕೆ.ಆರ್.ಪೇಟೆಯ ವಿಜಯಲಕ್ಷ್ಮೀ ರೈಸ್ ಮಿಲ್‌ನಲ್ಲಿ ಅಕ್ರಮ ನಡೆದಿದ್ದು, ವಸತಿ ಶಾಲೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿಯನ್ನು ಸೇಲ್ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ರೈತ ಸಂಘದ ಕಾರ್ಯಕರ್ತರ ಕಾರ್ಯಾಚರಣೆಯಿಂದ ಈ ಅಕ್ರಮ ಪಡಿತರ ಅಕ್ಕಿ ದಂಧೆ ಬಯಲಾಗಿದೆ. ರೈಸ್ ಮಿಲ್ ಗೆ ಸರ್ಕಾರಿ ಪಡಿತರ ಹೊತ್ತು ತಂದಿದ್ದ ಲಾರಿ ಮೇಲಯೇ ರೈತ ಸಂಘದದವರು ಕಾರ್ಯಾಚರಣೆ ನಡೆಸಿ, ಈ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ.

ಈ ವೇಳೆ ಲಾರಿಯಲ್ಲಿ ಸರ್ಕಾರದ ಪಡಿತರ ವಿತರಣೆಯ 64 ಮೂಟೆ ಗೋದಿ, 48 ಮೂಟೆ ಪಡಿತರ ಅಕ್ಕಿ ಪತ್ತೆಯಾಗಿದೆ.ಈ ಪಡಿತರವನ್ನು ತಾಲೂಕಿನ ಗವಿಮಠದ ಮುರಾರ್ಜಿ ವಸತಿ ಶಾಲೆಗೆ ಸರಬರಾಜು ಮಾಡಲಾಗಿತ್ತು.
ಆದರೆ ಈ ಶಾಲೆಯಲ್ಲಿ ಬಹುತೇಕ ವಿಧ್ಯಾರ್ಥಿಗಳು ಪರೀಕ್ಷೆ ಮುಗಿಸಿ ಈಗಾಗಲೇ ಮನೆಗೆ ಹೋಗಿರೋ ಕಾರಣದಿಂದ ಮಂಜೂರಾಗಿದ್ದ ಪಡಿತರ ಮಾರಾಟಕ್ಕೆ ಯತ್ನಿಸಲಾಗಿದೆ.

ಶಾಲೆಯ ಶಿಕ್ಷಕರು ಈ ರೀತಿ ಅಕ್ರಮವಾಗಿ ವಿದ್ಯಾರ್ಥಿಗಳ ಪಡಿತರ ಮಾರಿಕೊಳ್ತಿರೋ ಮಾಹಿತಿ ಆಧರಿಸಿ ರೈತ ಸಂಘದವರ ಕಾರ್ಯಾಚರಣೆ ನಡೆಸಿ, ಪತ್ತೆಯಾದ ಲಾರಿಯನ್ನು್ ಆಹಾರ ಅಧಿಕಾರಿಗಳಿಗೆ ನೀಡಿದ್ದಾರೆ. ಸದ್ಯ ಲಾರಿ ಸಹಿತ ಅಕ್ಕಿಯನ್ನು ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕೆ.ಆರ್.ಪೇಟೆ ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

About The Author