ಕರ್ನಾಟಕ ಟಿವಿ ಮಂಡ್ಯ : ಕಳಪೆ ಗುಣಮಟ್ಟದ ಜಂಕ್ ಫುಡ್, ಕುರ್ ಕುರೆ ಹಾಗೂ ಬೋಟಿ ಮಾರಾಟ ಅಂಗಡಿಗಳ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಪಟ್ಟಣಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಆರೋಗ್ಯ ಸಿಬ್ಬಂಧಿಗಳ ದಾಳಿ…ಅಂಗಡಿಗಳಿಗೆ ಬೀಗ ಮುದ್ರೆ ..
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜಂಕ್ ಫುಡ್ ಗಳು, ತಂಬಾಕು ಉತ್ಪನ್ನಗಳು, ಬೀಡಿ ಸಿಗರೇಟು ಮಾರಾಟ ಮಾಡುತ್ತಿದ್ದ ಓಂ ಸ್ಟೋರ್, ಶ್ರೀ ಲಕ್ಷ್ಮೀ ಸ್ಟೋರ್ ಹಾಗೂ ಪೂಜಾ ಸ್ಟೋರ್ ಗಳ ಮೇಲೆ ಪುರಸಭೆಯ ಆರೋಗ್ಯ ಸಿಬ್ಬಂಧಿಗಳು ಹಾಗೂ ಪೋಲಿಸರು ದಾಳಿ ನಡೆಸಿ ಕಳಪೆ ಗುಣಮಟ್ಟದ ಜಂಕ್ ಫುಡ್ ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆಯ ಸಿಬ್ಬಂಧಿಗಳು ಹಾಗೂ ಪೋಲಿಸರು ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ಅಂಗಡಿಗಳಿಗೆ ಬೀಗಮುದ್ರೆ ಹಾಕಿದ್ದಾರೆ…
ಪ್ಲಾಸ್ಟಿಕ್ ಮಿಶ್ರಿತ ಕಳಪೆ ಗುಣಮಟ್ಟದ ಬೋಟಿ ಮಾರಾಟ, ಹತ್ತಿ ಉರಿದ ಬೋಟಿ, ಕಳಪೆ ಗುಣಮಟ್ಟದ ಜಂಕ್ ಫುಡ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರನ್ನು ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ತರಾಟೆಗೆ ತೆಗೆದುಕೊಂಡರು . ದಾಳಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪರಿಸರ ಎಂಜಿನಿಯರ್ ರಕ್ಷಿತಗೌಡ, ಆರೋಗ್ಯ ಪರಿವೀಕ್ಷಕರಾದ ಅಶೋಕ್, ನರಸಿಂಹಶೆಟ್ಟಿ, ಮಂಟೇಮಂಜು, ಶಾರದಾ, ನಾರಾಯಣ, ಮುತ್ತಣ್ಣ ಮತ್ತಿತರರು ಭಾಗವಹಿಸಿದ್ದರು.
ಪ್ರವೀಣ್ ಕುಮಾರ್, ಕರ್ನಾಟಕ ಟವಿ, ಮಂಡ್ಯ