ರೈತರ ನೆರೆವಿಗೆ ನಿಂತ ಸಂಸದ ಡಿ.ಕೆ.ಬ್ರದರ್

ಮಂಡ್ಯ : ಬೆಳೆ ನಷ್ಟದ ಆತಂಕದಲ್ಲಿದ್ದ ರೈತರಿಂದ ಬೆಳೆ ಖರೀದಿಗೆ ಸಂಸದ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರಿಂದ ತಮ್ಮದೆ ಟ್ರಸ್ಟ್ ಮೂಲಕ ಬೆಳೆ ಖರೀದಿಸುತ್ತಿದ್ದಾರೆ.  ರೈತರಿಂದ ಖರೀದಿಸಿದ ಬೆಳೆಯನ್ನು ತಮ್ಮ ಕ್ಷೇತ್ರದಾದ್ಯಂತ ಬಡವರಿಗೆ  ಡಿ.ಕೆ ಸುರೇಶ್ ಉಚಿತವಾಗಿ ವಿತರಣೆ ಮಾಡ್ತಿದ್ದಾರೆ.  ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಸೇರಿ ಹಲವು ಭಾಗದಲ್ಲಿ ವಿವಿಧ ಬೆಳೆ ಖರೀದಿಸುವ ಮೂಲಕ ಕೊರೊನಾದಿಂದ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೆ ಪರದಾಡ್ತಿದ್ದ ರೈತರ ನೆರವಿಗೆ ನಿಂತಿದ್ದಾರೆ. ಪಾಂಡವಪುರ ರೈತನ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಬೆಳೆ ಖರೀಧಿಗೆ ಆಗಮಿಸಿದ್ದ ಡಿ.ಕೆ ಸುರೇಶ್ ಯಾವುದೇ ರೈತರು‌ಬೆಳೆ ನಷ್ಟ ಮಾಡದಂತೆ ಮನವಿ ಮಾಡಿದ್ರು. ತಮ್ಮ ಬೆಂಬಲಿಗರ ಜೊತೆ ಸಂಕಷ್ಟದಲ್ಲಿರೋ ರೈತರ ಜಮೀನಿಗೆ ಭೇಟಿ ನೀಡಿ ಫಸಲು ವೀಕ್ಷಿಣೆ ಮಾಡಿದ ಡಿ.ಕೆ ಸುರೇಶ್ ರೈತ ರಾಮೇಗೌಡ ಬೆಳೆದಿದ್ದ ಕುಂಬಳಕಾಯಿ ಮತ್ತು ಟಮೋಟ ಖರೀದಿಸಿ ರೈತನಿಗೆ ಧೈರ್ಯ ತುಂಬಿದ್ರು.  ಸಂಸದ ಸುರೇಶ್ ರ ರೈತ ಪರ ನಿಲುವಿಗೆ ಮಂಡ್ಯ ಜಿಲ್ಲೆಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

https://www.youtube.com/watch?v=YQLM7MJ5qHA

ಪ್ರವೀಣ್ ಕುಮಾರ್ ಜಿ.ಟಿ ಕರ್ನಾಟಕ ಟಿವಿ, ಮಂಡ್ಯ

About The Author