Mandya: ಡೆವಿಲ್ ಸಿನಿಮಾ ರಿಲೀಸ್ ಪ್ರಯುಕ್ತ ಕಡಿಮೆ ಬೆಲೆಗೆ ಬಿರಿಯಾನಿ ಆಫರ್ ನೀಡಿದ ಅಭಿಮಾನಿ

Mandya News: ಮಂಡ್ಯದಲ್ಲಿ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ ರಿಲೀಸ್ ಆಗಿದ್ದು, ಡಿ ಬಾಸ್ ಫ್ಯಾನ್ಸ್ ಡೆವಿಲ್ ನೋಡಿ ಬಂದವರಿಗೆ, ಸವಿಯಲು ಬಿರಿಯಾನಿ ವ್ಯವಸ್ಥೆ ಮಾಡಿದ್ದರು.

ಮಂಡ್ಯದ ಸುಭಾಷ್ ನಗರದಲ್ಲಿರುವ ರೆಟ್ರೋ ಕೆಫೆ ಹೋಟೆಲ್‌ನಲ್ಲಿ ಈ ಆಫರ್ ನಡೆಯುತ್ತಿದ್ದು, ಹೋಟೆಲ್ ನ ಮಾಲೀಕ ವಿನು ಎಂಬುವರದಿಂದ ದರ್ಶನ್ ಫ್ಯಾನ್ಸ್ ಗಳಿಗೆ ವಿಶೇಷ ಆಫರ್ ನೀಡಲಾಗಿತ್ತು. ಇವರು ಕೂಡ ದರ್ಶನ್ ಅಭಿಮಾನಿಯಾಗಿದ್ದು, ಡೆವಿಲ್ ಸಿನಿಮಾ ರಿಲೀಸ್ ಪ್ರಯುಕ್ತ ವಿಶೇಷ ಆಫರ್ ನೀಡಿದ್ದರು.

ಸಿನಿಮಾ ರಿಲೀಸ್ ಆಗಿರುವ ಇಂದಿನಿಂದ ಇನ್ನೂ 4 ದಿನದವರೆಗೂ ಈ ಆಫರ್ ನಡೆಯಲಿದೆ. ಹಾಗಾಗಿ ಯಾರ್ಯಾರು ದರ್ಶನ್ ಫ್ಯಾನ್ಸ್ ಇದ್ದಿರೋ, ಅವರು ಮಂಡ್ಯದಲ್ಲಿ ಸಿನಿಮಾ ನೋಡಿ, ಅದರ ಪ್ರೂಫ್ ಇವರಿಗೆ ತೋರಿಸಿದರೆ, ಇವರು ನಿಮಗೆ ಕಡಿಮೆ ಬೆಲೆಗೆ ಬಿರಿಯಾನಿ ನೀಡುತ್ತಾರೆ.

ನಾರ್ಮಲ್ ದಿನದಲ್ಲಿ ಹೋದರೆ, 1 ಬಿರಿಯಾನಿಗೆ 70 ರೂಪಾಯಿ ಇರುತ್ತದೆ. ಆದರೆ ಆಫರ್ ಇರುವ ದಿನ 60 ರೂಪಾಯಿ ಬಿರಿಯಾನಿ ಸಿಗುತ್ತದೆ. ಇನ್ನು ಡೆವಿಲ್ ಸಿನಿಮಾ ನೋಡಿದ ಟಿಕೇಟ್ ತೋರಿಸಿದ್ರೆ, 49 ರೂಪಾಯಿಗೆ ಬಿರಿಯಾನಿ ನೀಡುತ್ತಾರೆ.

ಇನ್ನು ಡೆವಿಲ್ ಸಿನಿಮಾ ನೋಡಿ ಬರುತ್ತಿರುವ ದಚ್ಚು ಫ್ಯಾನ್ಸ್,. ಸಿನಿಮಾ ಟಿಕೇಟ್ ನೀಡಿ, ರಿಯಾಯಿತಿಯಲ್ಲಿ ಬಿರಿಯಾನಿ ಸವಿಯುತ್ತಿದ್ದಾರೆ.

About The Author