Mandya News: ಮಂಡ್ಯದ ವಿಶ್ವವಿಖ್ಯಾತ ಮೇಲುಕೋಟೆ ಶ್ರೀಚೆಲುವನಾರಾಯಣ ಸ್ವಾಮಿ ಪ್ರಥಮ ತೆಪ್ಪೋತ್ಸವ ನಡೆದಿದೆ. ಮಂಡ್ಯದ ಪಾಂಡವಪುರ ತಾಲೂಕಿನಲ್ಲಿ ಮೇಲುಕೋಟೆ ಕ್ಷೇತ್ರವಿದ್ದು, ಭವ್ಯವಾಗಿ ಅಲಂಕೃತಗೊಂಡ ಮಂಟಪದಲ್ಲಿ ಚೆಲುವ ನಾರಾಯಣನಿಗೆ ಪ್ರಥಮ ತೆಪ್ಪೋತ್ಸವ ನಡೆದಿದೆ.
ಅಮೂಲ್ಯವಾದ ಮುತ್ತುಮುಡಿ ಮತ್ತು ಮುತ್ತುಗಳ ಹಾರಗಳೊಂದಿಗೆ ಚೆಲುವನಾರಾಯಣಸ್ವಾಮಿಗೆ ಅಲಂಕಾರ ಮಾಡಲಾಗಿದ್ದು, ಶ್ರೀದೇವಿ-ಭೂದೇವಿ ಸಮೇತನಾಗಿ ಚೆಲುವನಾರಾಯಣಸ್ವಾಮಿ ಕುಳಿತಿದ್ದು, ಜೊತೆಗೆ ರಾಮಾನುಜಾಚಾರ್ಯರನ್ನು ಪ್ರತಿಷ್ಠಾಪಿಸಿ, ತೆಪ್ಪೋತ್ಸವ ನಡೆಸಲಾಗಿದೆ.
ಕಲ್ಯಾಣಿಯಲ್ಲಿ 3 ಪ್ರದಕ್ಷಿಣೆ ನಡೆಯುವುದರೊಂದಿಗೆ ಪ್ರಥಮ ತೆಪ್ಪೋತ್ಸವ ನಡೆದಿದ್ದು, ಈ ವೇಳೆ ಕಲ್ಯಾಣಿಯ ಮೇಲೆ ಹಣತೆಗಳನ್ನು ಹಚ್ಚಿ ಹರಿಬಿಡಲಾಗಿತ್ತು. ತೆಪ್ಪೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.




