Mandya News: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಫ್ಲೆಕ್ಸ್ ವಾರ್ ಜೋರಾಗಿದೆ. ಕೆ.ಆರ್.ಪೇಟೆ ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಕಿತ್ತಾಟ ಜೋರಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದ್ದರೂ ಕೂಡ, ಮಂಡ್ಯದಲ್ಲೇ ಜೆಡಿಎಸ್ ಮತ್ತು ಬಿಜೆಪಿ ಮದ್ಯೆ ಬಿರುಕು ಜೋರಾಗಿದೆ. ಯುಗಾದಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಶಾಸಕ ಹೆಚ್.ಟಿ ಮಂಜು ಬೆಂಬಲಿಗರು ಹಾಕಿದ್ದ ಫ್ಲೆಕ್ಸ್ ಮೇಲೆ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಹಾಕಿದ್ದಾರೆಂದು ಆರೋಪಿಸಿ, ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.
ಈ ಕಾರಣಕ್ಕೆ ಮಧ್ಯ ಪ್ರವೇಶಿಸಿದ ಪೋಲೀಸರು, ಪುರಸಭೆ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಬಿಜೆಪಿ ಫ್ಲೆಕ್ಸ್ ತೆರವುಗ`ಳಿಸಿದ್ದಾರೆ. ಇನ್ನು ಈ ಫ್ಲೆಕ್ಸ್ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಯುಗಾದಿ ಶುಭಾಶಯ ಕೋರಿದ್ದ ಫ್ಲೆಕ್ಸ್ ಆಗಿದ್ದು, ಫ್ಲೆಕ್ಸ್ ತೆರವಿದೆ ನಾರಾಯಣ ಗೌಡರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




