Thursday, December 12, 2024

Latest Posts

ಮಂಡ್ಯದಲ್ಲಿ ಫಲಿಸಿತು ಕೊರೊನಾ ವಾರಿಯರ್ಸ್ ಶ್ರಮ

- Advertisement -

ಮಂಡ್ಯ : ಜಿಲ್ಲೆಯನ್ನ ಒಂದು ಕೊರೊನಾ ಸೋಂಕಿತರಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯಲ್ಲಿ ಹತ್ತೇ ದಿನದಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿತ್ತು.. ಪೊಲೀಸರು ಕೊರೊನಾ ಸೋಂಕಿತರ ಜಾಡು ಹಿಡಿದರೆ , ಜಿಲ್ಲಾಡಳಿತ ಸಕಲವನ್ನ ನಿರ್ವಹಿಸುತ್ತಿತ್ತು, ವೈದ್ಯಕೀಯ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ಕೊಡುವುದರಲ್ಲಿ ಮಗ್ನವಾಗಿತ್ತು. ಇದೀಗ ಮಂಡ್ಯ ಜಿಲ್ಲೆಯ 16 ಸೋಂಕಿತರಲ್ಲಿ ನಾಲ್ವರು ಗುಣಮುಖರಾಗಿದ್ದಾರೆ.. ಇವರ ಕೊರೊನಾ ಟೆಸ್ಟ್ ನೆಗೆಟಿವ್ ಬಂದಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಇವರನ್ನ ಬೇರೆಡೆ ಕ್ವಾರಂಟೈನ್ ನಲ್ಲಿ ಇಟ್ಟು ಮತ್ತೊಂದು ಪರೀಕ್ಷೆ ಮಾಡಿ ಅದರಲ್ಲೂ ನೆಗೆಟಿವ್ ಬಂದರೆ ನಂತರ ಮನೆಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಡಾ ವೆಂಕಟೇಶ್ ತಿಳಿಸಿದ್ದಾರೆ.

ಕೊರೊನಾ ವಾರಿಯರ್ಸ್ ಕಾರ್ಯಕ್ಕೆ ಕಾಂಗ್ರೆಸ್ ಮೆಚ್ಚುಗೆ

ಇನ್ನು ಕೊರೊನಾ ವಾರಿಯರ್ಸ್ ಕಾರ್ಯಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡ್ತಿದ್ದಾರೆ ಅಂತ ಚಲುವರಾಯಸ್ವಾಮಿ ಹೇಳಿದ್ದಾರೆ. ಹಾಗೆಯೇ ಉಳಿದ ಸೋಂಕಿತರ ಪರೀಕ್ಷೆಯೂ ಮುಂದಿನ ದಿನದಲ್ಲಿ ನೆಗೆಟೆವ್ ಬರಲಿದ್ದು ಗುಣಮುಖರಾಗಲಿದ್ದಾರೆ ಅಂತ ವಿಶ್ವಾಸವ್ಯಕ್ತಪಡಿಸಿದ್ದಾರೆ..

ಪ್ರವೀಣ್ ಕುಮಾರ್ ಜಿಟಿ.ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss