Sunday, December 22, 2024

Latest Posts

2 ಸಾವಿರ ಕುಟುಂಬಗಳಿಗೆ ದಿನಸಿ ವಿತರಣೆ

- Advertisement -

ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಮದ ನಗರ ಪ್ರದೇಶ ಜನರಷ್ಟೇ ಅಲ್ಲ ಗ್ರಾಮೀಣ ಭಾಗದ ಜನರೂ ಸಮಸ್ಯೆ ಸಿಲುಕಿದ್ದಾರೆ.. ಹೀಗಾಗಿ ಸಂಸದೆ ಸುಮಲತಾ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗರು ಮೇಲುಕೋಟೆ ಹೋಬಳಿಯ 2 ಸಾವಿರ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಿದ್ದಾರೆ.. ಮೇಲುಕೋಟೆಯ ಆನಂದಾಶ್ರಮ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಶಠಗೋಪ ರಾಮಾನುಜ ಜಿಯರ್ ಅವರ ನೇತೃತ್ವದಲ್ಲಿ ಸಂಸದೆ ಸುಮಲತಾ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗರಾದ ಕನಗೋನಹಳ್ಳಿ ಪರಮೇಶ್ ಗೌಡರು ಹಾಗೂ ಪಾಂಡವಪುರ ದೀಪಕ್ ರವರುಗಳು ರೆಡ್ ಕ್ರಾಸ್ ಸಂಸ್ಥೆಯ ಕೊರೋನಾ ಸೈನಿಕರ  ಬೆಂಬಲದೊಂದಿಗೆ ಕೊರೋನಾಜಾಗೃತಿ ಭಿತ್ತಿಪತ್ರ ಹಾಗೂ ಪಡಿತರ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸ್ಥಳೀಯ ಮುಖಂಡರುಗಳು ಸಂಸದೆ ಸುಮಲತಾ ಅಂಬರೀಶ್ ಹಾಗೂ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರ ಸುಪುತ್ರ ದರ್ಶನ ಪುಟ್ಟಣ್ಣನವರ ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿದರು..

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=vwBWKMt7Ymk
- Advertisement -

Latest Posts

Don't Miss