Sunday, December 22, 2024

Latest Posts

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದಲ್ಲಿ ಏಕೀಕೃತ ವಿಶ್ವವಿದ್ಯಾಲಯವಾಗಿ ಉನ್ನತದರ್ಜೆಗೇರಿದ ಮಂಡ್ಯದ ಸರ್ಕಾರಿ ಮಹಾವಿದ್ಯಾಲಯ ಕಾಲೇಜು

- Advertisement -

Mandya News:

2019ರ ಮಾರ್ಚ್ 2ರಂದು ಮಾನ್ಯ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಕರ್ನಾಟಕದ ಮೊದಲ ಸರ್ಕಾರಿ ಸ್ವಾಯತ್ತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಾಲೇಜು ಮಂಡ್ಯ ಇದನ್ನು ರೂಸಾ ಯೋಜನೆಯಡಿಯಲ್ಲಿ ಮಾನ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದಲ್ಲಿ ರೂ. 55 ಕೋಟಹಣವನ್ನು ಮಂಜೂರು ಮಾಡಿ ಏಕೀಕೃತ ವಿಶ್ವವಿದ್ಯಾಲಯವಾಗಿ ಉನ್ನತದರ್ಜೆಗೇರಿಸಿತು. ಈ ಹಣದಿಂದ ವಿಶ್ವವಿದ್ಯಾಲಯದಲ್ಲಿಕಲಾ ಭವನ, ವಾಣಿಜ್ಯ ಭವನ, ಗ್ರಂಥಾಲಯ ಮುಂತಾದವುಗಳು ನಿರ್ಮಾಣಗೊಂಡಿದೆ. ಸದರಿ ಹೊಸ ಕಟ್ಟಡಗಳನ್ನು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಘನ ಸರ್ಕಾರದ ಇತರೆ ಸಚಿವರು ಹಾಗೂ ಶಾಸಕರುಗಳು ಆಗಸ್ಟ್ 11 ರಂದು ಲೋಕಾರ್ಪಣಿ ಮಾಡಿದ್ದಾರೆ.

ಪ್ರಾದೇಶಿಕ ಸಮಾನತೆ ನೀಡುವ ದೃಷ್ಟಿಯಿಂದ ಮಂಡ್ಯ ಏಕೀಕೃತ ವಿಶ್ವವಿದ್ಯಾಲಯವನ್ನು ಮಂಡ್ಯ ಜಿಲ್ಲಾ ವಿಶ್ವವಿದ್ಯಾಲಯವಾಗಿ ಆಗಸ್ಟ್ 25 ರಂದು ಮಾನ್ಯ ಸಚಿವ ಸಂಪುಟ ಪರಿವರ್ತಿಸಿ ಅನುಮೋದಿಸಿದೆ. ಇದರಿಂದಮಂಡ್ಯ ಜಿಲ್ಲಾ ವ್ಯಾಪ್ತಿಯ ಸುಮಾರು 47ಕ್ಕೂ ಹೆಚ್ಚು ಪದವಿ ಕಾಲೇಜುಗಳು ಮಂಡ್ಯ ವಿಶ್ವವಿದ್ಯಾಲಯದ ಸಂಯೋಜನೆಗೆಒಳಪಡಲಿವೆ. ನೂತನ ವಿಶ್ವವಿದ್ಯಾಲಯವು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಿಗೆ ಅಗತ್ಯವಿರುವ ಸಂಶೋಧನಾ ಸೌಲಭ್ಯವನ್ನು ಒದಗಿಸುವೆ. ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳ ಅಧ್ಯಾಪಕರುಗಳಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಅಗತ್ಯವಿರುವ ಅಕಾಡೆಮಿಕ್ ಸ್ಟಾಫ್ ಕಾಲೇಜು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಸಂಶೋಧನಾ ವಿದ್ಯಾರ್ಥಿಗಳ ಪಿ.ಹೆಚ್.ಡಿ ಪದವಿಗೆ ಮುಕ್ತ ಅವಕಾಶ ದೊರೆಯಲಿದೆ.

ಕೈಗಾರಿಕಾ ಒಡಂಬಡಿಕೆ ಮಾಡಿಕೊಂಡು ಕೈಗಾರಿಕೆಗಳಿಗೆ ಅಗತ್ಯವಿರುವ ಕೋರ್ಸುಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳನ್ನು ಉದ್ಯೋಗಸ್ಥರನ್ನಾ ಮಾಡುವ ಗುರಿಯನ್ನು ಮಂಡ್ಯ ವಿಶ್ವಏದ್ಯಾಲಯವು ಹೊಂದಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರ ರಾಜ್ಯದ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೂ ಸಂಶೋಧನೆಗೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮುಕ್ತ ಅವಕಾಶ ದೊರೆಯಲಿದೆ. ಒಟ್ಟಾಗಿ ಏಕೀಕೃತ ವಿಶ್ವವಿದ್ಯಾಲಯವನ್ನು ಜಿಲ್ಲಾ ವ್ಯಾಪ್ತಿಗೆ ತಂದಿರುವುದು ಮಂಡ್ಯ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವರದಾನವಾಗಿದೆ.

ಅನುಕೂಲಗಳು:

  1. ಪ್ರಾದೇಶಿಕ ಅಸಮತೋಲನ ನಿವಾರಣಿ.
  2. ಒಂದು ಕೇಂದ್ರೀಕೃತ ಕಛೇರಿಯಿಂದ ಆಡಳಿತ,
  3. ಹೆಚ್ಚಿನ ಹಣದ ಸವಲತ್ತು.
  4. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಅವಕಾಶ.
  5. ರಿಸರ್ಚ್ ಸೆಂಟರ್‌ಗಳಿಂದ ಉನ್ನತ ಮಟ್ಟದ ಆವಿಷ್ಠಾರಗಳು.
  6. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಪೂರ್ಣ ಪ್ರಮಾಣದಲ್ಲ.

 ಹಣಕಾಸಿನ ವಿಚಾರದಲ್ಲಿ ಮಂಡ್ಯ ವಿ ವಿ ಕುಲಪತಿಗಳು ಡಾ ಪುಟ್ಟರಾಜು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

- Advertisement -

Latest Posts

Don't Miss