- Advertisement -
ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ಪಟ್ಟಣದ ವ್ಯಾಪ್ತಿಯ ನಿವಾಸಿಗಳ ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಮೇ.31ರ ವರೆಗೆ ವಿಸ್ತರಣೆ ಮಾಡಲಾಗಿದ್ದು ಮೇ.31ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರ ರಿಯಾಯಿತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ ..
ಕೃಷ್ಣರಾಜಪೇಟೆ ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಮುಖ್ಯಾಧಿಕಾರಿ ಸತೀಶ್ ಕುಮಾರ್, ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಸರ್ಕಾರದ ನಿರ್ದೇಶನದಂತೆ ಮೇ.31ರವರೆಗೆ ವಿಸ್ತರಿಸಲಾಗಿದ್ದು ಶೇ.5ರ ರಿಯಾಯಿತಿಯನ್ನೂ ನೀಡಲಾಗುವುದು… ಪುರಸಭೆಯ ಕಾರ್ಯಾಲಯದಲ್ಲಿ ವಿಶೇಷ ಕೌಂಟರ್ ಗಳನ್ನು ತೆರೆಯಲಾಗಿದ್ದು ಆಸ್ತಿ ತೆರಿಗೆ, ಟ್ರೇಡ್ ಲೈಸೆನ್ಸ್ ಹಾಗೂ ಇತರೆ ಕಂದಾಯ ಬಾಕಿಯನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸತೀಶ್ ಕುಮಾರ್ ವಿವರಿಸಿದರು..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ ಮಂಡ್ಯ
- Advertisement -