ಕರ್ನಾಟಕ ಟಿವಿ ಮಂಡ್ಯ: ಕೋರೋನ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿರುವ ದೃಷ್ಟಿಯಿಂದ ನಾಗಮಂಗಲ ಪಟ್ಟಣದ ಕ್ರೀಡಾಂಗಣದಲ್ಲಿರುವ ಮಾರುಕಟ್ಟೆ ದ್ವಾರದಲ್ಲಿ ಸೋಂಕು ನಿವಾರಕ ಸಿಂಪಡಣಾ ಟನಲ್ ಸ್ಥಾಪಿಸಿ ಜನತೆಯ ಅನುಕೂಲಕ್ಕೆ ಮಾಜಿ ಸಂಸದ ಹಾಗೂ ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ ಮಹಾಮಾರಿ ಕೋರೋನ ವೈರಸ್ ಅನ್ನು ತೊಲಗಿಸಲು ಕರ್ನಾಟಕದಲ್ಲಿ ಮೊದಲ ಬಾರಿಗೆ ಯಾದಗಿರಿ ಯಲ್ಲಿ ಸ್ಪ್ರೇ ಅಳವಡಿಸಲಾಗಿತ್ತು. ತದನಂತರ ಬೆಂಗಳೂರು, ರಾಮನಗರ, ಮಂಡ್ಯ, ಇದೀಗ ನಾಗಮಂಗಲ ಕ್ಷೇತ್ರದ ಜನರ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದೆ. ಮಾರುಕಟ್ಟೆ ಮುಖ್ಯದ್ವಾರದಲ್ಲಿ ದಿನನಿತ್ಯ ಬರುವ ಸಾರ್ವಜನಿಕರು ಒಳಗೆ ಬರುವಾಗ ಟನಲ್ ಮೂಲಕ ಹೋಗಿ ನಂತರ ಟನಲ್ ಮೂಲಕವೇ ಹೊರಗೆ ಹೋಗ ಬೇಕಾಗುತ್ತದೆ ಎಂದು ತಿಳಿಸಿದರು. ಕ್ಷೇತ್ರದ ಜನತೆ ಇದರ ಸದಪಯೋಗ ಪಡೆದುಕೊಳ್ಳ ಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೂಂಡು ಆದಷ್ಟು ಮನೆಯಿಂದ ಹೊರಬರದೆ ಸೊಂಕು ಹರಡದಂತೆ ಜಾಗೃತಿ ವಹಿಸುವಂತೆ ಮನವಿ ಮಾಡಿದರು.
ಈ ವೇಳೆ ಮಳವಳ್ಳಿಯ ಕಾಂಗ್ರೆಸ್ ಮಾಜಿ ಶಾಸಕ ನರೇಂದ್ರಸ್ವಾಮಿ. ಹಾಗೂ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪ್ರಸನ್ನ, ಮುಖಂಡರಾದ ತುರಬನಹಳ್ಳಿ ರಾಜೇಗೌಡ,ಹರೀಶ್ ಮುಂತಾದವರು ಇದ್ದರು
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿಟಿ, ಮಂಡ್ಯ