ರೋಗಿಗಳೋಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ‘

ಮಂಡ್ಯ : ಮಾಜಿ ಸಚಿವ ಸಿ,ಎಸ್ ಪುಟ್ಟರಾಜು ಇಂದು ಪಾಂಡವಪುರ  ಉಪವಿಭಾಗೀಯ ಆಸ್ಪತ್ರೆಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಆಸ್ಪತ್ರೆಯ ಸೌಲಭ್ಯ ಕುರಿತಂತೆ ಸಮಾಲೋಚನೆ ನಡೆಸಿದ ಶಾಸಕ‌‌ ಈ ವೇಳೆ ಆಸ್ಪತ್ರೆಯ ಐಸಲೋಶನ್ ವಾರ್ಡ್ ಗೆ  ಭೇಟಿ ನೀಡಿದ್ರು.. ಈ ಸಂದರ್ಭದಲ್ಲಿ ಕೊರೊನಾ ತಪಾಸಣೆ ನಡೆಸುವಾಗ ರೋಗಿಗಳ ನಡುವೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ ರೋಗಿಗಳು ಅಂತರ ಕಾಯ್ದುಕೊಳ್ಳದಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ವೈದ್ಯರಿಗೆ ಶಾಸಕ ಪುಟ್ಟರಾಜು ಕಿವಿಮಾತು ಹೇಳಿದ್ರು.  ಇದೇ ವೇಳೆ ವೈದ್ಯರಿಗೆ ಮೆಡಿಕಲ್ ಕಿಟ್ ವಿತರಿಸಿದ ಶಾಸಕ ಪುಟ್ಟರಾಜು ವೈದ್ಯರಿಗೆ ಅಗತ್ಯ ಸೌಲಭ್ಯ ಒದಗಿಸಲು ಬದ್ದನಿದ್ದೇನೆ ಎಂದರು. ಶಾಸಕರ ಭೇಟಿ ವೇಳೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಟಿಎಚ್ ಒ ಡಾ.ಸಿ.ಎ.ಅರವಿಂದ, ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಎಂ.ಕುಮಾರ್ ಹಾಜರಿದ್ರು.

https://www.youtube.com/watch?v=pGt4KgADkAg

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

About The Author