Mandya News: ಆದಿ ಚುಂಚನಗಿರಿ ಶ್ರೀಗಳ ವಿರುದ್ಧ ಶಾಸಕ ರಮೇಶ್ ಬಾಬು ಬಂಡಿಸೇದ್ದೇಗೌಡರು ನೀಡಿದ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ನಾನು ಯಾವಾಗ ಮಾತನಾಡಿದ್ರೂ ಕಾಂಟ್ರುವರ್ಷಿ ಆಗುತ್ತೆ. ನಾನು ಮಠ ಸರಿಲ್ಲ ಅಂತ ಹೇಳಿಲ್ಲ. ಚುಂಚನಗಿರಿ ಸ್ವಾಮಿಗಳು ಎಲ್ಲರನ್ನು ವಿಶ್ವಾಸ ಇಟ್ಟುಕೊಂಡಿದ್ದಾರೆ. ಚುಂಚನಗಿರಿ ಶ್ರೀ ಬಿಟ್ಟುಹೋದ ಸಂಸ್ಥೆ ಚೆನ್ನಾಗಿ ನಡೆಯಬೇಕು. ಆ ಭಾವನೆಯಲ್ಲಿ ನಾನು ಹೇಳಿದ್ದೆ ಅಷ್ಟೆ. ನಿರ್ಮಾಲನಂದನಾಥ ಸ್ವಾಮಿ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿ ನಾನಲ್ಲ. ಮಾತನಾಡುವ ಸಂದರ್ಭದಲ್ಲಿ ಸಣ್ಣ ಪದ ವ್ಯತ್ಯಾಸ ಆಗುತ್ತೆ. ಒಕ್ಕಲಿಗರ ಸಂಘದ ಅನೇಕರು ಮಾತನಾಡಿದ್ದಾರೆ. ಅವರ ಮನಸ್ಸಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡರು ಹೇಳಿದ್ದಾರೆ.
ನಿರ್ಮಲಾನಂದನಾಥ ಸ್ವಾಮಿ ಅವರ ಮನಸ್ಸಿಗೆ ನೋವಾಗುವ ರೀತಿ ನಡೆದುಕೊಂಡಿಲ್ಲ. ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆಯಾಚಿಸುತ್ತೇನೆ. ನಮ್ಮ ಮಠವನ್ನು ಹೋರ ದೇಶದಲ್ಲಿ ಕಟ್ಟಿದ್ದಾರೆ ಅವರ ಪರ ಇದ್ದೇವೆ.
ಅವರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಇದನ್ನು ಮುಂದುವರಿಸಿಕೊಂಡು ಹೋಗುವುದು ಬೇಡ ಇಲ್ಲಿಗೆ ಬಿಡಿ. ನಮ್ಮ ಮಠ ಹೆಚ್ಚು ಸಹಾಯ ಮಾಡಲಿ ಎಂದು ಹೇಳಿದ್ದು ಅಷ್ಟೆ. ಕೆಟ್ಟ ಯೋಚನೆಯಲ್ಲಿ ನಾನು ಮಾತನಾಡಿಲ್ಲ. ನಾನು ಯಾರ ವಿರುದ್ಧ ಮಾತನಾಡಿಲ್ಲ. ಮಾತಿನ ಬರದಲ್ಲಿ ಈ ರೀತಿ ಆಗಿದೆ ಅಷ್ಟೆ. ನಾನು ಯಾರ ಮನಸ್ಸಿಗೂ ನೋವುಂಟು ಮಾಡಬೇಕು ಅಂತ ಹೇಳಿಲ್ಲ. ಜನರ ಜೊತೆ ಇರುವುದೇ ನನ್ನ ವೃತ್ತಿ. ನಾನು ಮಠದ ಸದ್ಬಕ್ತ ಜನರು ಯಾರು ಕೂಡ ಅನ್ಯಥಾ ಭಾವಿಸಬೇಡಿ. ಮಠಕ್ಕೆ ಸೇವೆ ಮಾಡಿದವರು ಸದ್ಯದಲ್ಲೆ ಬರ್ತಾರೆ ಅವಾಗ ಮಾತನಾಡೋಣ ಎಂದು ಶಾಸಕ ರಮೇಶ್ ಹೇಳಿದ್ದಾರೆ.




