Mandya: ಉದ್ಘಾಟನೆಯಾಗದೆ ಧೂಳು ಹಿಡಿಯುತ್ತಿದೆ 27 ಕೋಟಿ ವೆಚ್ಚದ ತಾಯಿ ಮಗು ಆಸ್ಪತ್ರೆ

Mandya News: ಮಂಡ್ಯದಲ್ಲಿ 27 ಕೋಟಿ ರೂಪಾಯಿ ವೆಚ್ಚದಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪಿಸಲಾಗಿದೆ. ಆದರೆ ಅದರಿಂದೇನೂ ಪ್ರಯೋಜನವೇ ಆಗಿಲ್ಲ. ಕಾರಣ ಆ ಆಸ್ಪತ್ರೆ ಕಟ್ಟಿ 1 ವರ್ಷ ಕಳೆದರೂ ಇದುವರೆಗೂ ಉದ್ಘಾಟನೆಯಾಗಿಲ್ಲ.

ಮಂಡ್ಯದ ಕೆ.ಆರ್.ಪೇಟೆಯಲ್ಲಿ ಈ ಆಸ್ಪತ್ರೆ ಕಟ್ಟಲಾಗಿದ್ದು, ರಾಜಕೀಯದ ಕಾರಣಕ್ಕೆ ಇದನ್ನು ಇನ್ನುವರೆಗೂ ಉದ್ಘಾಟನೆ ಮಾಡಲಾಗಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಯಡಿಯೂರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಆಸ್ಪತ್ರೆ ಹಣ ಮಂಜೂರಾಗಿತ್ತು. ಇದರಲ್ಲಿ 50 ಬೆಡ್ ಇದ್ದು 27 ಕೋಟಿ ಖರ್ಚು ಮಾಡಿ ಈ ಹೈಟೆಕ್ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಅಂದು ಶಾಸಕರಾಗಿದ್ದ ನಾರಾಯಣಗೌಡರೇ ಈ ಆಸ್ಪತ್ರೆ ನಿರ್ಮಿಸಲು ಗುದ್ದಲಿ ಪೂಜೆ ಮಾಡಿದ್ದರು.

ಆದರೆ ಇದೂವರೆಗೂ ಈ ಆಸ್ಪತ್ರೆ ಉದ್ಘಾಟನೆ ಆಗಿಯೇ ಇಲ್ಲ. ಮಂಡ್ಯದಲ್ಲಿ ಆಸ್ಪತ್ರೆ ಇದ್ದರೂ, ಆರಂಭವಾಗದ ಕಾರಣ, ಇಲ್ಲಿನ ಮಹಿಳೆಯರು ಚಿಕಿತ್ಸೆಗಾಗಿ ಮಂಡ್ಯ ನಗರ, ಹಾಸನಕ್ಕೆ ಅಲೆಯುವಂತಾಗಿದೆ. ಹಾಗಾಗಿ ಆದಷ್ಟು ಬೇಗ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ, ಅನುಕೂಲವಾಗುವಂತೆ ಮಾಡಿ. ಇಲ್ಲವಾದಲ್ಲಿ ನಾವು ಈ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

About The Author