Friday, July 11, 2025

Latest Posts

ಪಾಳು ಬಾವಿಯಲ್ಲಿನ ಕಸದ ರಾಶಿ ಮಧ್ಯೆ ನವಜಾತ ಶಿಶು ಪತ್ತೆ…!

- Advertisement -

Mandya News:

ಮಂಡ್ಯದಲ್ಲಿ  ಆಳವಾದ ಬಾವಿ  ಒಳಗಡೆ ಕಸದ  ರಾಶಿಯಲ್ಲಿ  ನವಜಾತ ಶಿಶು  ಪತ್ತೆಯಾಗಿದೆ, ಎಂದು  ತಿಳಿದು ಬಂದಿದೆ. ನವಜಾತ ಗಂಡು  ಶಿಶು ಪತ್ತೆಯಾಗಿದ್ದು ಗ್ರಾಮಸ್ಥರು ಸೇರಿ ಮಗುವನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ನವಜಾತ ಶಿಶು ರಕ್ಷಣೆ ಮಾಡಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಕಸ ಕಡ್ಡಿಯೇ ತುಂಬಿದ್ದ ಪಾಳುಬಾವಿಯಲ್ಲಿ ಬಿದ್ದಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ನವಜಾತ ಶಿಶು ಬದುಕುಳಿದಿದೆ. ಆಗ ತಾನೇ ಜನಿಸಿರುವ ಗಂಡು ಮಗವನ್ನು ಪಾಳು ಬಾವಿಗೆ ಎಸೆದಿದ್ದು ತಾಯಿ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

 

ಮಂಡ್ಯ: ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸುಮಲತಾ ಅಂಬರೀಷ್

ಮಡಿಕೇರಿ:ತಲಕಾವೇರಿ ತೀರ್ಥೋದ್ಭವ ಮುಹೂರ್ತ ನಿಗಧಿ

ಭಿಕ್ಷಾಟನೆ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು: ಕೋಟಾ ಶ್ರೀನಿವಾಸ ಪೂಜಾರಿ

- Advertisement -

Latest Posts

Don't Miss