- Advertisement -
Mandya News: ಮಂಡ್ಯ: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಮನೆ ಮುಂದೆ ಕಟ್ಟಿದ್ದ ಸಾಕು ನಾಯಿಯನ್ನು ಚಿರತೆ ಎಳೆದೋಯ್ದಿದೆ.
ಮಂಡ್ಯದ ಕೆ ಆರ್ ಪೇಟೆ ತಾ ಹೀರಳಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಿರಳಹಳ್ಳಿ ಜಯರಾಮ್ ಎಂಬುವವರ ಮನೆ ಮುಂದೆ ಕಟ್ಟಿದ್ದ ಸಾಕು ನಾಯಿಯನ್ನು ಚಿರತೆ ಎಳೆದೋಯ್ದಿದೆ. ಈ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ದೃಶ್ಯ ಬೆಚ್ಚಿ ಬೀಳಿಸುವಂತಿದೆ.
ಅಕ್ಟೋಬರ್ 10ರಂದು ಈ ಘಟನೆ ನಡೆದಿದ್ದು, ನಿರಂತರ ಚಿರತೆ ಉಪಟಳದಿಂದ ಗ್ರಾಮಸ್ಥರು ಆತಂಕರಾಗಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
- Advertisement -