Mandya News: ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ದೇಗುಲಕ್ಕೆ ಶಾಸಕ ಯತ್ನಾಳ್ ಭೇಟಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಯತ್ನಾಳ್ ಅವರಿಗೆ ದೇಗುಲದ ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ ಸ್ವಾಗತ ಮಾಡಲಾಯಿತು. ಈ ವೇಳೆ ಅವರ ಜತೆ ಹಿಂದೂಪರ ಸಂಘಟನೆಗಳ ಕೂಡ ಸಾಥ್ ನೀಡಿದ್ದರು.
ಈ ವೇಳೆ ಮಾತನಾಡಿದ ಯತ್ನಾಳ್, RSS ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ. ಪ್ರಿಯಾಂಕ ಗಾಂಧಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದು ಮೂರ್ಖತನದ ವಿಚಾರ.
ಜವಹರ್ ಲಾಲ್ ಇಂದ ಇಲ್ಲಿಯವರೆಗೆ ಎಲ್ಲರು ಪ್ರಯತ್ನ ಮಾಡಿದ್ದಾರೆ. RSS ಅಸ್ತಿತ್ವದಲ್ಲಿದೆ ಅಳಿಸಲು ಸಾದ್ಯವಿಲ್ಲ. ಮುಸ್ಲಿಂ ತುಷ್ಟಿಕರಣಕ್ಕೆ ಇಂತಹ ಹೇಳಿಕೆ ಕೊಡ್ತಾರೆ. ನ್ಯಾಯಾಲಯದ ವ್ಯವಸ್ಥೆ ಇದೆ ದೇಶದಲ್ಲಿ.
ಮುಸ್ಲಿಂ ರನ್ನ ಖುಷಿ ಪಡಿಸಲು ಪ್ರಿಯಾಂಕ ಖರ್ಗೆ ಹೇಳಿಕೆ ಕೊಡ್ತಾರೆ ಅಷ್ಟೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಹಿಂದೂ ಜಾತ್ರೆ, ಹಬ್ಬ ಹರಿದಿನಗಳ ಮೇಲೆ, ಶಿವಾಜಿ, ಗಣೇಶ ಹಬ್ಬ ಮೇಲೆ ದಾಳಿ ನಡೆಯುತ್ತಿದೆ. ಒಂದು ಮಾತ್ರ ಸತ್ಯ ಈ ದೇಶದಲ್ಲಿ ಹಿಂದೂಗಳು ಮುಸ್ಲಿಂ ಹಬ್ಬಗಳ ಮೇಲೆ ಎಂದು ಕಲ್ಲು ಹಾಕಿಲ್ಲ. ತಪ್ಪು ಮಾಡಿದವರ ಮೇಲೆ ಕೇಸ್ ಹಾಕಿ. ಸರ್ಕಾರದ ಒತ್ತಡದಿಂದ ಅಮಾಯಕ ಯುವಕರ ಮೇಲೆ ಕೆಸ್ ಹಾಕ್ತಾರೆ. ನಮ್ಮ ಸರ್ಕಾರ ಇದ್ದಾಗ ಇಂತಹ ಕೆಲಸ ಮಾಡಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
2028ಕ್ಕೆ ಹಿಂದೂ ಸರ್ಕಾರ ಬರಲು ಎಲ್ಲರ ಕೂಗು ಇದೆ. ಹಳೆ ಮೈಸೂರು ಭಾಗ ಮಂಡ್ಯ ಜಿಲ್ಲೆಯಲ್ಲಿ ಹಿಂದುತ್ವ ಜಾಗೃತಿಯಾಗಬೇಕು. ಕಲ್ಲು ತೂರಾಟ ಹಿಂದೂಗಳ ಜಾಗೃತರಾಗಬೇಕು. ಇವರು 4 % ಇದ್ದಾರೆ ಹಿಂದೂಗಳು ರಕ್ಷಣೆ ಆಗಬೇಕು. ಮುಸ್ಲಿಂ ಒಲೈಕೆ ಆಗ್ತಿದೆ. ಮುಂದೆ ಮುಸ್ಲಿಂ ಆಗಿ ಹುಟ್ಟಬೇಕು ಅಂತಾರೆ. ಮುಸ್ಲಿಂ ಕಾರ್ಯಕ್ರಮದಲ್ಲಿ ಅವರ ಟೋಪಿ ಹಾಕ್ತಾರೆ. ಇದು ರಾಜ್ಯ ಸರ್ಕಾರದ ಹಿಂದುಗಳ ರಕ್ಷಣೆ ಆಗ್ತಿಲ್ಲ. ಕರ್ನಾಟಕವನ್ನು ಮುಸ್ಲಿಂ ಮಾಡಲು ಹೊರಟಿದೆ. ಹಿಂದುಗಳಿಗೆ ಅನ್ಯಾಯವಾದ್ರೆ ಹೋರಾಟ ಮಾಡಲ್ಲ. ಮಂಡ್ಯದಲ್ಲಿ ಹಿಂದೂಗಳ ಒಗ್ಗಟ್ಟಾಗ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಯತ್ನಾಳ್, ಹಿಂದೂಗಳ ಮೇಲಿನ ಕೆಸ್ ವಾಪಸು ಪಡೆದಿಲ್ಲ. ಕೆಜೆ ಹಳ್ಳಿ,ಡಿಜೆ ಹಳ್ಳಿ ಪ್ರಕರಣ ಆರೋಪಿಗಳ ಕೇಸ್ ಕಾಂಗ್ರೆಸ್ ಪಡೆಯುತ್ತೆ. ಯುವಕರಿಗೆ ಡಿಜೆ ಹಾಕೋದು ಸಹಜ ಸರ್ಕಾರ ಬ್ಯಾನ್ ಮಾಡಿದೆ . ಒಂದು ಒಂದು ಜಿಲ್ಲೆಗೆ ಅನುಮತಿ ತಾರತಮ್ಯ ನಡೀತಿದೆ. DJ ಬ್ಯಾನ್ ಮಾಡ್ತೀರಿ. ಆದರೆ ಮಸೀದಿಯ ಸೌಂಡ್ ನಿಂದ ಶಾಲಾ ಮಕ್ಕಳಿಗೆ ತೊಂದರೆ ಆಗ್ತಿದೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡ್ತಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಂ ಬೆಂಬಲದ ಸರ್ಕಾರ ನಡೆಯುತ್ತಿದೆ. ಈ ಕಾರಣಕ್ಕೆ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಯುವಕರಿಗೆ ಉದ್ಯೋಗ ಇಲ್ಲ. ಎಲ್ಲಾ ಇಲಾಖೆಯಲ್ಲಿ ಕೆಲಸ ಖಾಲಿ ಇದೆ. ಪೊಲೀಸ್ ಇಲಾಖೆಯನ್ನ ಮುಸ್ಲಿಮ್ ಕರಣ ಮಾಡಲು ಹೊರಟೆದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಇರಲಿಲ್ಲ. ಜೆಡಿಎಸ್ ಭದ್ರಕೋಟೆ ಇತ್ತು ಮುಂದೆ ಆ ಅಲೆ ಇದೆ ಎಂದು ಯತ್ನಾಳ್ ಹೇಳಿದ್ದಾರೆ.