Mandya News: ರಾಜಕೀಯದಲ್ಲಿ ಕದಲೂರು ಉದಯ್ ಐಸ್ಲ್ಯಾಂಡಿ ಚೀಪುವ ಹುಡ್ಗ: ಡಿ.ರಮೇಶ್

Mandya News: ಮಂಡ್ಯದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ,ರಮೇಶ್ ಕದಲೂರು ಉದಯ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಜಕೀಯದಲ್ಲಿ ಕದಲೂರು ಉದಯ್ ಐಸ್ಲ್ಯಾಂಡಿ ಚೀಪುವ ಹುಡ್ಗ. ದೇವೇಗೌಡ್ರು ಮುಂದೆ ನಿಲ್ಲುವ ಯೋಗ್ಯತೆ ಇಲ್ಲ ನಾಲಿಗೆ ಮೇಲೆ ಹಿಡಿತ ಇರಲಿ. ಸುದರ್ಶನ ಚಕ್ರದ ರೀತಿ ಮದ್ದೂರು ಶಾಸಕರ ತಲೆ ತಿರುಗುತ್ತಿದೆ. ಸೀಮೆಗೆ ಇಲ್ಲದ ಶಾಸಕರು ಇವರೇನಲ್ಲ. ಇಂತಹ ಶಾಸಕರನ್ನ ಬಹಳಷ್ಟು ಜನರನ್ನ ನೋಡಿದ್ದೇವೆ. ಬಾಯಿಗೆ ಬಂದಾಗೆ ಮಾತನಾಡೋದಲ್ಲ. ಕಾಂಗ್ರೆಸ್ ಹಾಗೂ ದುಡ್ಡಿನ ಅಲೆಯಲ್ಲಿ ತೂರಿಬಂದಂತ ಮನುಷ್ಯ. ದೇವೇಗೌಡ್ರು ಮುಂದೆ ನಿಲ್ಲುವ ಯೋಗ್ಯತೆ ಇಲ್ಲ ಎಂದು ರಮೇಶ್ ಕಿಡಿಕಾರಿದ್ದಾರೆ.

ಒಬ್ಬ ಶಾಸಕ ಇವರ ಮಕ್ಕಳು, ಮೊಮ್ಮಕ್ಕಳು ಮಾಡಿದ್ರೆ ಬಿಡಸಲಿ. ದೇವೇಗೌಡ್ರು ಯಾವತ್ತು ಒಳ್ಳೆಯ ಕೆಲಸ ಮಾಡೋರು. ಪ್ರಜ್ವಲ್ ತಪ್ಪು ಮಾಡಿದ್ದಾರೋ ಬಿಟ್ಟಿದ್ದಾರೋ ಕಾನುನು ತೀರ್ಮಾನ ಮಾಡುತ್ತೆ. ಇದೊಂದು ವಿಷಯ ಸಾಕು ಶಾಸಕರ ಗಿರಿಯಿಂದ ತೆಗಿಸೋಕೆ. ನಾಲಿಗೆಗೆ ಹಿಡಿತ ಇಲ್ಲ, ದೇವೇಗೌಡ್ರು ಮನೆಯ ಪುಟ್ಟ ಮಗು ಮೇಲೆ ಕಣ್ಣು ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ಇಲ್ವಾ ಕುಟುಂಬ ರಾಜಕಾರಣ? ಎಂದು ರಮೇಶ್ ಉದಯ್‌ರನ್ನು ಪ್ರಶ್ನಿಸಿದ್ದಾರೆ.

ದೇವೇಗೌಡ್ರು ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯದಲ್ಲಿ ಉದಯ್ ಐಸ್ಲ್ಯಾಂಡಿ ಚೀಪುವ ಹುಡ್ಗ
ನಾಗೇಗೌಡ್ರು ಕಾಂಗ್ರೆಸ್ ಕಟ್ಟಿದ ನಾಯಕ ಅವರನ್ನು ಕಿತ್ತೆಸೆದರು. ಕುಮಾರಸ್ವಾಮಿ ಬಗ್ಗೆ ಬೈಯೋದು ಮೀಡಿಯಾ ಮುಂದೆ ಫೋಜ್ ಕೊಡೋದು. ನಿಮ್ಮನ್ನ ಹರಾಜು ಹಾಕ್ತೇವೆ ಎಚ್ಚರಿಕೆ ಇರಲಿ. ಜನರು ಆಶೀರ್ವಾದ ಮಾಡಿದ್ದಾರೆ ಉಳಿಸಿಕೊಳ್ಳಿ. ದೇವೇಗೌಡ್ರು, ಕುಮಾರಸ್ವಾಮಿ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ಡಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

About The Author